

ದೇವದುರ್ಗ: ಭಾವಜೀವಿ ಎಂದೇ ಪ್ರಸಿದ್ಧ ಪಡೆದಿದ್ದ ಸಾಹಿತಿ, ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ಕಸಾಪ ತಾಲೂಕು ಘಟಕ ಶನಿವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ವೆಂಕಟೇಶಮೂರ್ತಿ ಕನ್ನಡದ ಅತ್ಯುತ್ತಮ ಲೇಖಕರಲ್ಲಿ ಒಬ್ಬರಾಗಿದ್ದರು. ತಮ್ಮ ಲೇಖನ, ಬರವಣಿಗೆ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಅವರ ಸಾಹಿತ್ಯ ಕೃಷಿ ಆಸಕ್ತಿದಾಯಕವಾಗಿದ್ದು, ಎಲ್ಲರೂ ಅಧ್ಯಯನ ಮಾಡುವಂಥದ್ಧು. ಕಲಬುರಗಿಯಲ್ಲಿ ಆಯೋಜಿಸಿದ್ದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು ಎಂದು ಮೆಲುಕು ಹಾಕಿದರು.
ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಸಹಕಾರ್ಯದರ್ಶಿ ಶಿವರಾಜ ರುದ್ರಾಕ್ಷಿ, ಮಲ್ಲಪ್ಪ ನಾಯಕ, ಮುಖಂಡರಾದ ಶ್ರೀನಿವಾಸ್ ದಾಸರ್, ಚಂದ್ರಕಾಂತ ನಾಯಕ, ಭೀಮಣ್ಣ ನಾಯಕ, ರಮೇಶ್ ನಾಯಕ, ಹನುಮಂತ್ರಾಯ ನಾಡದಾಳ್, ಹನುಮಂತ್ರಾಯ, ಮೌನೇಶ್ ನಾಯಕ ಗೋಗಿ, ಕೃಷ್ಣಕುಮಾರ್, ಸಂಗಮೇಶ್ ಹರವಿ, ಸುಂದರೇಶ್ ಇತರರಿದ್ದರು.