ಕನ್ನಡ ಕುಲಕ್ಕೆ ಪೌರೋಹಿತ್ಯ ಒದಗಿಸಿದ ಧೀಮಂತ ಆಲೂರು ವೆಂಕಟರಾಯರು

IMG-20240722-WA0000
Published on

ಗದಗ: ಒಂದು ಕಾಲದಲ್ಲಿ ಕನ್ನಡ ಹಾಗೂ ಕರ್ನಾಟಕತ್ವದ ಕಲ್ಪನೆ ಇಲ್ಲದಿದ್ದ ಸಮಯದಲ್ಲಿ ಕನ್ನಡ ಕಂಪನ್ನು ಕರ್ನಾಟಕದ ಅಸ್ತಿತ್ವವನ್ನು ಜಗಕೆ ಸಾರಲು ಹರಸಾಹಸ ಮಾಡಿದವರೆಂದರೆ ‘ಕನ್ನಡಕುಲಪುರೋಹಿತ’ ರೆಂದು ಖ್ಯಾತರಾಗಿದ್ದ ಆಲೂರ ವೆಂಕಟರಾಯರು. ಹರಿದು ಹೋಗಲಿದ್ದ ಕರ್ನಾಟಕ ರಾಜ್ಯವನು ಏಕೀಕರಣ ಹೋರಾಟದ ಮೂಲಕ ಒಂದುಗೂಡಿಸುವಲ್ಲಿ ಶ್ರಮಿಸಿದ ಅನೇಕ ಮಹನೀಯರಲ್ಲಿ ಇವರೂ ಒಬ್ವರಾಗಿದ್ದಾರೆಂದು ಬರಹಗಾರ ಬಿ.ಎಲ್.ಪತ್ತಾರ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗದಿಂದ ದಿ:೨೦ ರಂದು ತೋಂಟದಶ್ರೀಗಳ ಕನ್ನಡ ಭವನದಲ್ಲಿ ಸಾಹಿತ್ಯ ಸಿಂಚನ ಮಾಲಿಕೆಯಲ್ಲಿ ಮುಂದುವರೆದು ಮಾತನಾಡುತ್ತ ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಇವುಗಳ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿಯನ್ನು ಬಿಟ್ಟು ಅವರ ಕನಸಿನ ಕೂಸಾದ ಕರ್ನಾಟಕ ನೂತನ ವಿದ್ಯಾಲಯವೆಂಬ ರಾಷ್ಟಿçÃಯ ಶಾಲೆಯನ್ನು ಪ್ರಾರಂಭಿಸಿದರು. ಸ್ವಾವಲಂಬಿ ಜೀವನ ನಡೆಸಲು ನೆರವಾದರು. ಇತಿಹಾಸದಲ್ಲಿ ಆಸಕ್ತಿಯಿದ್ದ ಆಲೂರರು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿಯನ್ನು ಸ್ಥಾಪಿಸಿದರು. ಕರ್ನಾಟಕ ವಿದ್ಯಾವರ್ಧದಕ ಸಂಘದ ಮುಖವಾಣಿಯಾಗಿದ್ದ ‘ವಾಗ್ಭೂಷಣ’ ಪತ್ರಿಕೆಯ ಸಂಪಾದಕರಾಗಿ ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ತಿಳಿಸಿ ಅದಕ್ಕಾಗಿ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವಂತಹ ಲೇಖನವನ್ನು ಬರೆದು ಪ್ರಕಟಿಸಿದರು. ೧೯೧೫ ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಲು ಕಾರಣೀಭೂತರಾದರು. ಶಿಕ್ಷಣ ಮಿಮಾಂಸೆ , ಕರ್ನಾಟಕ ಗತವೈಭವ, ಗೀತಾರಹಸ್ಯ, ರಾಷ್ಟಿçÃಯತೆಯ ಮಿಮಾಂಸೆ, ನನ್ನ ಜೀವನ ಸ್ಮೃತಿಗಳು ಇವರ ಕೃತಿಗಳಾಗಿವೆ. ಕನ್ನಡ ನಾಡು-ನುಡಿಗೆ ಆಲೂರರು ನೀಡಿದ ಕೊಡುಗೆ ಅನನ್ಯವಾಗಿದೆಯೆಂದು ಸಾಹಿತಿ ಬಿ.ಎಲ್.ಪತ್ತಾರ ನುಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಗದುಗು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ ಮಹಾನ್ ಕವಿ ಕುಮಾರವ್ಯಾಸ, ನಗೆಗಾರ ನಯಸೇನ, ಚಾಮರಸ ಕವಿ,ದುರ್ಗಸಿಂಹರAತಹ ಮಹಾನ್ ಕವಿಗಳನ್ನು ಹೊಂದಿರುವ ಗದಗ ಜಿಲ್ಲೆಯಲ್ಲಿ ಇವರ ಕುರಿತು ಸಾಹಿತ್ಯಾಭಾಸಿಗರಿಗೆ ಮಾಹಿತಿಯ ಕೊರತೆಯಿದೆ. ಈ ಕವಿಗಳ ಪ್ರತಿಷ್ಠಾನ ಗದುಗಿನಲ್ಲಿ ಆಗಬೇಕೆಂಬ ಹಂಬಲ ಬಹಳ ದಿನಗಳಿಂದ ಇದೆಯೆಂದು ಮಾತನಾಡುತ್ತ ಆಗಸ್ಟ ತಿಂಗಳಿನ ಕೊನೆಯ ವಾರದಲ್ಲಿ ಗಜೇಂದ್ರಗಡದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ತಯಾರಿ ನಡೆದಿದ್ದು ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಾಸಕರ ಉಪಸ್ಥಿತಿಯಲ್ಲಿ ಲಾಂಛನ ಬಿಡುಗಡೆ ಮಾಡಿ ಅಧಿಕೃತವಾಗಿ ಚಾಲನೆ ನೀಡಲಾಗುವುದೆಂದರು.
ಅತಿಥಿ ಎಚ್.ಟಿ.ಸಂಜೀವಸ್ವಾಮಿ ಮಾತನಾಡಿ ಕನ್ನಡ ಇಂದಿನ ದಿನಗಳಲ್ಲಿ ಇಂಗ್ಲೀಷ್‌ನ ಪ್ರಭಾವಕ್ಕೊಳಗಾಗಿ ಅಪಬ್ರಂಶವಾಗಿ ಕನ್ನಡ ±ಬ್ದಗಳಿಗೆ ಪರ್ಯಾಯವಾಗಿ ಇಂಗ್ಲೀಷ್ ಪದಗಳ ಬಳಕೆಯಾಗುತ್ತಿವೆ ಅದಕ್ಕಾಗಿ ಪರಿಷತ್ತು ಕನ್ನಡ-ಇಂಗ್ಲೀಷ್ ಪದಗಳ ಶಬ್ದಗಳ ಅರ್ಥವನ್ನು ಪ್ರತಿವಾರ ಬಳಕೆಯಲ್ಲಿರುವ ಶಬ್ದಗಳ ಅರ್ಥವನ್ನು ಹೇಳುವಂತಾಗಬೇಕು ಮತ್ತು ಪರಿಷತ್ತಿನಲ್ಲಿ ಗ್ರಂಥಾಲಯವನ್ನು ಪ್ರಾರಂಭ ಮಾಡಿ ಸಾಹಿತ್ಯಾಸಕ್ತರಿಗೆ ಸುಲಭವಾಗಿ ಪುಸ್ತಕಗಳು ದೊರೆತು ಎರವಲು ಸೇವೆಯ ಮೇಲೆ ಓದಿ ಮರಳಿಸುವ ವ್ಯವಸ್ಥೆಯಾಗಬೇಕೆಂದರು.
ವೇದಿಕೆ ಮೇಲೆ ಜಿಲ್ಲಾಧ್ಯಕ್ಷ ವಿವೇಕಾನಂದಗೌಡಪಾಟೀಲ, ಬಿ.ಎಲ್ ಪತ್ತಾರ, ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ಪ್ರೊ.ಕಿಶೋರಬಾಬು ನಾಗರಕಟ್ಟಿ, ಎಚ್.ಟಿ.ಸಂಜೀವಸ್ವಾಮಿ ಶ್ರೀಕಾಂತ ಬಡ್ಡೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೊ.ಚಂದ್ರಶೇಖರ ವಸ್ತçದ ಪ್ರೊ ಕೆ.ಎಚ್.ಬೇಲೂರ ಸಿ.ಎಂ.ಮಾರನಬಸರಿ ಪ್ರ. ತೋ,ನಾರಾಯಣಪೂರ ಎಸ್.ಎಸ್.ಕಳಸಾಪುರಶೆಟ್ರು ಪ್ರೊ.ಎಸ್ ಯು ಸಜ್ಜನಶೆಟ್ಟರ್ ಎಸ್ ಎಸ್ ಸೂಳಿಕೇರಿ ಶಶಿಕಾಂತ ಕೊರ್ಲಹಳ್ಳಿ, ಶ್ರೀಮತಿಯರಾದ ರತ್ನಕ್ಕ ಪಾಟೀಲ ಪದ್ಮಾ ಕಬಾಡಿ(ಜೈಹಿಂದ್) ಮಂಜುಳಾ ವೆಂಕಟೇಶಯ್ಯ ರಕ್ಷಿತಾ.ಎಸ್. ಗಿಡ್ನಂದಿ ರತ್ನಾ ಪುರಂತರ ಸುಧಾ ಬಳ್ಳಿ ಶೈಲಜಾ ಗಿಡ್ನಂದಿ ಬಸವರಾಜ ಗಣಪ್ಪನವರ ಜೆ.ಎ.ಪಾಟೀಲ ಅಮರೇಶ ರಾಂಪೂರ ಮುಂತಾದವರು ಉಪಸ್ಥಿತರಿದ್ದರು.
ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶ್ರೀಕಾಂತ ಬಡ್ಡೂರ ವಂದಿಸಿದರು. ಶಿವಾನಂದ ಗಿಡ್ನಂದಿ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net