29ರಂದು ಕಾಪು ಕನ್ನಡ ಸಾಹಿತ್ಯ ಸಮ್ಮೇಳನ, ಹಿರಿಯ ಸಾಹಿತಿ ಡಾ.ಭರತ್‌ಕುಮಾರ್ ಪೊಲಿಪು ಸರ್ವಾಧ್ಯಕ್ಷ

Bharath Kumar
Published on

ಪಡುಬಿದ್ರಿ: ಕಾಪು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ರಂಗಕರ್ಮಿ ಡಾ.ಭರತ್‌ಕುಮಾರ್ ಪೊಲಿಪು ಅವರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೇತೃತ್ವದಲ್ಲಿ ಶ್ರೀ ಗಣಪತಿ ಪ್ರೌಢಶಾಲೆ, ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲಾ ಸಹಕಾರದೊಂದಿಗೆ ಜ.29ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಶನಿವಾರ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸಮ್ಮೇಳನ ಸರ್ವಾಧ್ಯಕ್ಷರ ಹೆಸರು ಘೋಷಿಸಿದರು.

ಸಮ್ಮೇಳನದ ಗೌರವ ಅಧ್ಯಕ್ಷರಾಗಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾಗಿ ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು, ಪಿ.ವಿಶ್ವನಾಥ ಹೆಗ್ಡೆ ಪೇಟೆಮನೆ, ಕಾರ್ಯಾಧ್ಯಕ್ಷರಾಗಿ ಕೆ.ಅನಂತಪಟ್ಟಾಭಿ ರಾವ್, ಕಾರ್ಯದರ್ಶಿ ಕಸ್ತೂರಿರಾಮಚಂದ್ರ, ಜತೆಕಾರ್ಯದರ್ಶಿಗಳಾಗಿ ಯಶೋದಾ, ರಾಜೇಶ ಸೇರಿಗಾರ್ ಪಡುಬಿದ್ರಿ, ಉಪಾಧ್ಯಕ್ಷರು, ವಿವಿಧ ಉಪಸಮಿತಿಗಳ ಸಂಚಾಲಕರನ್ನು ನಿಯೋಜಿಸಲಾಯಿತು.

ಬೆಳಗ್ಗೆ 8.45ರಿಂದ ಸಂಜೆ 5.30ರವರೆಗೆ ಬದುಕಿಗೆ ಬೆಳಕು ಪರಿಕಲ್ಪನೆಯಡಿ ಆಯೋಜಿಸಿರುವ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಕಸಾಪ ಕಾಪು ತಾಲೂಕು ಘಟಕ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net