

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2025-26ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಪರಿಷತ್ತಿನ ಪುಸ್ತಕ ಮಾರಾಟ ಮಳಿಗೆಯಲ್ಲಿ 25 ರೂ. ಶುಲ್ಕ ಪಾವತಿಸಿ ಅರ್ಜಿಗಳನ್ನು ಪಡೆಯಬಹುದು. ಇಲ್ಲವೆ ಅಂಚೆ ವಿಳಾದೊಂದಿಗೆ 65 ರೂ. ಮನಿಯಾರ್ಡರ್ ಕಳಿಸಿ ಅರ್ಜಿ ಕಳುಹಿಸಲಾಗುವುದು. ಅಂತರ್ಜಾಲ ತಾಣ ಡಿಡಿಡಿ..ಜ್ಞಿ ಮೂಲಕ ಅರ್ಜಿ ಪಡೆಯುವವರು ಪ್ರತ್ಯೇಕವಾಗಿ 25 ರೂ. ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದ್ದು, ದಂಡ ಸಹಿತ 50 ರೂ. ಶುಲ್ಕ ಪಾವತಿಸಿ ಸೆಪ್ಟೆಂಬರ್ 30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪರಿಷತ್ತು ತಿಳಿಸಿದೆ.
ವಿವರಗಳಿಗೆ: ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು 560 018, ದೂ: 080-26612991,224238567,26623584 ಸಂಪರ್ಕಿಸಬಹುದಾಗಿದೆ.