ಕನ್ನಡ ಮಾನ್ಯತೆ, ಇಂಗ್ಲಿಷ್ ಕಲಿಕೆ ವಿರುದ್ಧ ಡಾ. ಗುಂಜಾಳ ಕಿಡಿ

3 Dwd 3 (Dr. S.R.Gunjal)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯಾದ್ಯಂತ ಆಂಗ್ಲ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಕನ್ನಡ ಮಾಧ್ಯಮದ ಶಾಲೆ ನಡೆಸಲು ಪರವಾನಿಗೆ ಪಡೆದು ಇಂಗ್ಲಿಷ್ ಬೋಧನೆ ಮಾಡುತ್ತಿವೆ. ಸರ್ಕಾರಕ್ಕೆ ಮೋಸ ಮಾಡಿದ ಇಂಥ 1,416 ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಎಂದು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಡಾ. ಎಸ್.ಆರ್. ಗುಂಜಾಳ ಸರ್ಕಾರವನ್ನು ಆಗ್ರಹಿಸಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸೋಮವಾರ ಜರುಗಿದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಮಾಧ್ಯಮದ ಪ್ರಶ್ನೆ ಇನ್ನೂ ಚರ್ಚೆಯ ಹಂತದಲ್ಲಿದೆ. ಅದು ಶಿಕ್ಷಣ ತಜ್ಞರು ಹಾಗೂ ಬುದ್ಧಿಜೀವಿಗಳು ನಿರ್ಣಯ ಮಾಡಬೇಕಾದ ಸಂಗತಿ. ಆದರೆ, ಸನ್ನಿವೇಶದ ಲಾಭ ಪಡೆದವರು ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಹಣ ಸಂಪಾದಿಸಲು ಹೊರಟಿರುವುದು ನಾಗರಿಕ ಸಮಾಜದ ನಡುವಿನ ಹಗಲು ದರೋಡೆ ಎಂದರು.

ಪ್ರಾಥಮಿಕ ಹಂತದಲ್ಲಿ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅಪಾಯವಿರುವುದು ಭ್ರಮೆಯಲ್ಲ, ವಾಸ್ತವ ಸಂಗತಿ. ಇಂಗ್ಲಿಷ್ ಕಲಿಕೆ ಅಪರಾಧವಲ್ಲ, ಅವಶ್ಯಕತೆ. ಆದರೆ, 4ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆ ಮೂಲಕ ಕಲಿಯುವುದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ತಳಹದಿ ಗಟ್ಟಿಯಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net