ಮಂಡ್ಯ: ಸಮಾಜದಲ್ಲಿ ಗುರು ಹಾಗೂ ಹಿರಿಯರ ಕಡೆಗಣಿಸುವುದು ತಪ್ಪೆಂದು ತಿಳಿದ್ದರೂ ಮಾಡುವುದು ಅಪರಾಧ ಎಂದು ಶಂಭು ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಕಲ್ಪನಾ ರಾಮಚಂದ್ರು ಹೇಳಿದರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್ ಮಂಡ್ಯ ತಾಲೂಕು ಘಟಕ, ಶಂಭು ಸೇವಾ ಟ್ರಸ್ಟ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ವೃದ್ಧಾಶ್ರಮ ನಿವಾಸಿಗಳಿಗೆ ಪೌಷ್ಠಿಕಾಹಾರ ಮತ್ತು ಸಿಹಿ ಹಣ್ಣು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗುರು ಮತ್ತು ಹಿರಿಯರ ಮಾರ್ಗದರ್ಶವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಎಲ್ಲವನ್ನೂ ಪಡೆಯಬಹುದು. ಆದರೆ ಪಾಲಕರ ಅವರ ಆಶೀರ್ವಾದ ಶ್ರೇಯಸ್ಸಿಗೆ ನಾಂದಿಯಾಗಿದೆ. ಮಾತ್ರವಲ್ಲದೆ ಜೀವನಕ್ಕೆ ನೆಮ್ಮದಿ ತಾಣ ಪಾಲಕರ ಮಡಿಲು ಎಂದು ನುಡಿದರು.
ಉದ್ಯಮಿ ಕೆ.ಆರ್.ನರಸಿಂಹ, ರಾಷ್ಟ್ರೀಯ ಮಾನವ ಹಕ್ಕುಗಳ ಸಲಹೆಗಾರ ಎಂ.ಗುರುಪ್ರಸಾದ್, ಪರಿಷತ್ ಜಿಲ್ಲಾಧ್ಯಕ್ಷ ಜಿ.ವಿ.ನಾಗರಾಜು, ಪೋತೇರ ಮಹದೇವು, ಎಂ.ಧರಣೇಂದ್ರಯ್ಯ, ಮಂಜುಳಾ, ಸುಧಾರಾಧ್ಯ, ಅಶ್ವಿನಿ ಹೆಬ್ಬಕವಾಡಿ, ರಾಜಣ್ಣ, ಗೀತಾಕಲ್ಲೂರು ಇತರರಿದ್ದರು.