ಕರ್ನಾಟಕ ಸಂಭ್ರಮ 50- ರಥಯಾತ್ರೆಗೆ ಸ್ವಾಗತ

filter: 0; jpegRotation: 0; fileterIntensity: 0.000000; filterMask: 0;
filter: 0; jpegRotation: 0; fileterIntensity: 0.000000; filterMask: 0;
Published on

ವಿಜಯವಾಣಿ ಸುದ್ದಿ ಜಾಲ ಸರಗೂರು
ನಾವೆಲ್ಲರೂ ನಾಡು, ನುಡಿಯ ಬಗ್ಗೆ ಅಭಿಮಾನ ರೂಢಿಸಿಕೊಂಡು ಕನ್ನಡ ಸಂಸ್ಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ರುಕೀಯಾ ಬೇಗಂ ಹೇಳಿದರು. ಪಟ್ಟಣದ ಕಮಾನು ಗೇಟ್ ಬಳಿ ಶನಿವಾರ ಕರ್ನಾಟಕ ಸಂಭ್ರಮ 50- ಜ್ಯೋತಿ ರಥಯಾತ್ರೆ
ಬರಮಾಡಿಕೊಂಡ ಸಂದರ್ಭ ಮಾತನಾಡಿದರು. ಕನ್ನಡ ಭಾಷೆ ನಮ್ಮ ಜೀವನದ ಪ್ರಮುಖ ಭಾಗವಾಗಬೇಕು. ಕನ್ನಡವನ್ನು ಸದಾಕಾಲ ಬಳಸು ವುದರಿಂದ ಭಾಷೆ ಶ್ರೇಷ್ಠತೆ ಮತ್ತಷ್ಟು ಹೆಚ್ಚುತ್ತದೆ ಎಂದರು. ಸರಗೂರು ಗಡಿ ಭಾಗದ ತಾಲೂಕಾಗಿದೆ. ವಿವಿಧ ಗ್ರಾಮಗಳಿಂದ ಜನರು ಕೆಲಸ, ಕಾರ್ಯಗಳಿಗೆ ಇಲ್ಲಿಗೆ ಬರುತ್ತಾರೆ. ಹಾಗಾಗಿ ಕಾರ್ಮಿಕರೊಂದಿಗೆ ಕನ್ನಡದಲ್ಲಿಯೇ ವ್ಯವಹಾರ ನಡೆಸುವ ಮೂಲಕ ಅವರಿಗೂ ನಮ್ಮ ಭಾಷೆ ಕಲಿಸುವ ಕೆಲಸ ಶ್ರಮಿಕ ವರ್ಗದಿಂದಲೇ ಆಗಬೇಕು ಎಂದರು. ನಮ್ಮೆಲ್ಲರ ಕನ್ನಡ ಪ್ರೇಮ ಕೇವಲ ನವೆಂಬರ್‌ಗೆ ಮಾತ್ರ ಸೀಮಿತವಾಗಬಾರದು. ಪ್ರತಿನಿತ್ಯ ಭಾಷಾಭಿಮಾನ ಜಾಗೃತವಾಗಿರಬೇಕು. ಕನ್ನಡ ನುಡಿ, ಸಂಸ್ಕೃತಿ, ಪರಂಪರೆಗಳಿಂದ ನಮಗೆ ಒಂದು ಶಕ್ತಿ ಬರಬೇಕು. ಸಮುದಾಯ, ಪಂಗಡ ಮೀರಿ ಕನ್ನಡ ನಮ್ಮೆಲ್ಲರ ಮಂತ್ರವಾಗಬೇಕು ಎಂದು ರುಕೀಯಾ ಬೇಗಂ ಹೇಳಿದರು.
ಮ್ಮೆಲ್ಲರ ಕರ್ತವ್ಯವಾಗಲಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ ಮಾತನಾಡಿ, ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣವಾಗಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯಾದ್ಯಂತ ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಆರಂಭಿಸಿದೆ. ನಾವೆಲ್ಲಾ ಕನ್ನಡಿಗರು. ಕನ್ನಡ ಭಾಷೆ, ನೆಲ, ಜಲ ಉಳಿಸಿ, ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ ಎಂದರು. ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ರಥಯಾತ್ರೆಗೆ ಪೂಜೆ ಸಲ್ಲಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net