ಗುಳೇದಗುಡ್ಡಕ್ಕೆ ಆಗಮಿಸಿದ ಕನ್ನಡ ರಥಯಾತ್ರೆ

gld-7-1
ಗುಳೇದಗುಡ್ಡ ನಗರಕ್ಕೆ ಆಗಮಿಸಿದ ರಥಯಾತ್ರೆಗೆ ತಾಲೂಕು ಆಡಳಿತ, ಕಸಾಪದಿಂದ ಅದ್ದೂರಿ ಸ್ವಾಗತ ಕೋರಲಾಯಿತು.
Published on

ಗುಳೇದಗುಡ್ಡ: ಕನ್ನಡ ರಥಯಾತ್ರೆ ಸೋಮವಾರ ಪಟ್ಟಣಕ್ಕೆ ಆಗಮಿಸಿದಾಗ ತಹಸೀಲ್ದಾರ್ ಕಚೇರಿ ಬಳಿ ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಕನ್ನಡಪರ ಸಂಘಟನೆಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು.

ತಹಸೀಲ್ದಾರ್ ಮಂಗಳಾ ಎಂ., ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಅವರು ರಥಯಾತ್ರೆಗೆ ಪೂಜೆ ಸಲ್ಲಿಸಿದರು.

ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಸಂಚರಿಸಿ ಕಮತಗಿಗೆ ತೆರಳಿತು. ಡೊಳ್ಳಿನ ಮೇಳ ಸೇರಿ ವಿವಿಧ ವಾದ್ಯಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ದ.ರಾ. ಬೇಂದ್ರೆ, ವಿ.ಕೆ. ಗೋಕಾಕ, ಕುವೆಂಪು, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಮಾಸ್ತಿ ವೆಂಕಟೇಶ ಅಯ್ಯಂಗಾರ ಸೇರಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿಗಳ ಭಾವಚಿತ್ರ ಹಾಗೂ 100 ಮೀಟರ್ ಉದ್ದದ ಕನ್ನಡ ಧ್ವಜದೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಕನ್ನಡ ಹೋರಾಟಗಾರರು, ಸ್ವಾತಂತ್ರೃವೀರರ ವೇಷಧರಿಸಿದ ಮಕ್ಕಳು ಗಮನಸೆಳೆದರು.

ವಿಶೇಷ ತಹಸೀಲ್ದಾರ್ ಮಹೇಶ ಗಸ್ತೆ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕು ಅಧ್ಯಕ್ಷ ಎಚ್.ಎಸ್. ಘಂಟಿ, ಕೋಶಾಧ್ಯಕ್ಷ ಸಿ.ಎಂ. ಜೋಶಿ, ಪುರಸಭೆ ಮ್ಯಾನೇಜರ್ ಎ.ಎಚ್. ಮುದ್ದೇಬಿಹಾಳ, ಕಂದಾಯ ನಿರೀಕ್ಷಕ ಶಿವಕುಮಾರ ಜೋಗಿನ, ಪುರಸಭೆ ಸದಸ್ಯರಾದ ಸಂತೋಷ ನಾಯನೇಗಲಿ, ಪ್ರಶಾಂತ ಜವಳಿ, ಯಲ್ಲಪ್ಪ ಮನ್ನಿಕಟ್ಟಿ, ರಾಜು ಹೆಬ್ಬಳ್ಳಿ, ವೈ.ಆರ್. ಹೆಬ್ಬಳ್ಳಿ, ಸೋಮಶೇಖರ ಕಲ್ಬುರ್ಗಿ, ಗುಂಡಪ್ಪ ಕೋಟಿ, ರಾಜಶೇಖರ ಪಾಗಿ, ಎಂ.ಎಂ. ತುಪ್ಪದ, ಸಿಆರ್‌ಪಿ ಭಾಗೀರಥಿ ಆಲೂರ, ರಾಮಚಂದ್ರ ಬಾಪಟ್, ರಾಜಶೇಖರ ಹುನಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net