

ಮೈಸೂರು: ಕನ್ನಡ ಭಾಷೆಯು ಜಗತ್ತಿನ ಅತಿ ಪುರಾತನ ಹಾಗೂ ಸುಂದರ ಭಾಷೆಯಾಗಿದೆ. ಈ ಭಾಷೆಯನ್ನು ಮುಂದಿನ ಪೀಳಿಗೆಗೆ ಇಷ್ಟೇ ಸುಂದ ರವಾಗಿ ತಿಳಿಸಿ ಕೊಡುವ ಗುರುತರವಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ವಿಜಯನಗರ 3ನೇ ಹಂತದ ವಿ.ಕೆ. ಪಬ್ಲಿಕ್ ಸ್ಕೂಲ್ನಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ನುಡಿ ಪರ್ವ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಉದ್ಘಾಟಿಸಿ ಮಾತನಾಡಿ, ವಿ.ಕೆ. ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಉತ್ತಮ ಗುಣಮಟ್ಟದ ಹಾಗೂ ಸಂಸ್ಕಾರಭರಿತ ಶಿಕ್ಷಣವನ್ನು ಮಕ್ಕಳಿಗೆ ನೀಡಿದ್ದೆ ಆದರೆ ಮುಂದಿನ ದಿನದಲ್ಲಿ ಆರೋಗ್ಯಕರವಾದ ಹಾಗೂ ಸುಸಂಸ್ಕೃತವಾದ ಸಮಾಜವೊಂದನ್ನು ನಿಸಂಶಯವಾಗಿ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜನಪದ ಸಾಹಿತಿ ಪಿ.ಕೆ. ರಾಜಶೇಖರ್ ಮಾತನಾಡಿ, ಮಕ್ಕಳಲ್ಲಿ ಕನ್ನಡ ಭಾಷೆಯ ಕಡೆಗೆ ಪ್ರೀತಿಯನ್ನು ಬೆಳೆಸುವುದರ ಮೂಲಕ ಪಾಲ ಕರು ಕನ್ನಡತನ ಮೆರೆಯಬೇಕು. ಕನ್ನಡದಲ್ಲಿ ಸಹಿ ಮಾಡಲು, ಕನ್ನಡದಲ್ಲಿ ಉತ್ತರಿಸಲು ಹಾಗೂ ತಂದೆ ತಾಯಿಗಳನ್ನು ಗೌರವಿಸುವಂತೆ ಪಾಲಕರು ಮಕ್ಕಳಿಗೆ ತಿಳಿಸಬೇಕು ಎಂದರು.
ಮಾಜಿ ಸಚಿವ ಶಿವಣ್ಣ ಮಾತನಾಡಿ, ಕನ್ನಡತನ ಉಳಿಯಬೇಕಾದರೆ ಪಾಲಕರು ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಜಾಗೃತಗೊಳಿಸಬೇಕು. ಶಿಕ್ಷಣ ಸಂಸ್ಥೆಗಳು ಸಮಾಜಮುಖಿಯಾಗಿ ತಮ್ಮ ಹೊಣೆಗಾರಿಕೆಯನ್ನರಿತು ಮಕ್ಕಳನ್ನು ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಬೆಳೆಸಿದ್ದೆ ಆದರೆ ಉತ್ತಮ ಸಮಾಜವನ್ನು ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ನಮ್ಮ ಶಾಲೆಯು ಮಕ್ಕಳನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಅಣಿಗೊಳಿಸುವಲ್ಲಿ ಹೆಚ್ಚಿನ ಗಮನ ಹರಿಸುತ್ತಿದೆ. ಇದೇ ರೀತಿ ಮುಂಬರುವ ದಿನಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಪಾಲಕರು ಮೊಬೈಲ್ ಬಳಕೆ ಕಡಿಮೆಗೊಳಿಸುವುದರ ಮೂಲಕ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆದು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ರೂಪಶ್ರೀ ಮಾತನಾ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಮಕ್ಕಳನ್ನು ಯಾರಿಗೂ ಕಡಿಮೆ ಇಲ್ಲದಂತೆ ಬೆಳೆಸಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಟಿ. ಮಂಜುನಾಥ್, ಸದಸ್ಯರಾದ ಪ್ರೊ.ಮಹದೇವಪ್ಪ, ರಾಮನಾಯಕ್, ಸುರೇಶ್ ಬಾಬು, ಕೆ.ಟಿ. ಗೋವಿಂದರಾಜು, ಶಿವಸ್ವಾಮಿ, ಲೋಬೋ ಹಾಗೂ ಇತರರು ಇದ್ದರು.