ಶಾರದಾವಿಲಾಸ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

Kannada Rajyotsava was celebrated at Sharada Vilas Undergraduate College
Published on

ಮೈಸೂರು: ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಪ್ರಾಂಶುಪಾಲ ಸಿ.ಕೆ.ಅಶೋಕ್‌ಕುಮಾರ್ ಮಾತನಾಡಿ, ಭಾಷೆಯನ್ನು ಬಳಸಿದಂತೆ ಬೆಳೆಯುತ್ತಾ ಹೋಗುತ್ತದೆ. ಕನ್ನಡವು ಇತಿಹಾಸ ವನ್ನು ಒಳಗೊಂಡಿದ್ದು, ತನ್ನದೇ ಆದ ನೆಲ, ಜಲ, ಸಂಸ್ಕೃತಿಯನ್ನು ಒಳಗೊಂಡಿದೆ. ಇಂತಹ ಪ್ರಾಚೀನ ಪರಂಪರೆ ಹಾಗೂ ಇತಿಹಾಸವಿರುವ ಮಾತೃಭಾಷೆಯನ್ನು ನಾವೆಲ್ಲರೂ ಕೂಡ ಹೆಚ್ಚು ಬಳಸಬೇಕು ಎಂದು ಕರೆ ನೀಡಿದರು.

ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಮಾತನಾಡಿ, ಭಾಷೆ ನಿಂತ ನೀರಲ್ಲ ಅದು ಹರಿಯುವ ನದಿ, ಅದೇ ರೀತಿ ನಮ್ಮ ಭಾಷೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತಗಳಲ್ಲಿ ಕಡ್ಡಾಯವಾಗಿ ಕಲಿಕೆಯಲ್ಲಿ ಮಕ್ಕಳು ತೊಡಗಬೇಕು. ಕನ್ನಡ ರಾಜ್ಯೋತ್ಸವವು ನವೆಂಬರ್ ತಿಂಗಳಿಗೆ ಮಾತ್ರ ಮೀಸಲಾಗದೇ ನಿತ್ಯೋತ್ಸವವಾಗಬೇಕು. ಕನ್ನಡ ಭಾಷೆಯನ್ನು ಓದುವ ಮತ್ತು ಬರೆಯುವ ಪ್ರಕ್ರಿಯೆ ಯುವಜನರಲ್ಲಿ ಹೆಚ್ಚಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿಲ್ಪ, ಡಾ.ಪೂಜಾ, ವೆಂಕಟರಾಮ, ಡಾ.ಡಿ.ಸಿ.ಉಮೇಶ್, ಡಾ.ಲಾವಣ್ಯ, ಮಧುರ, ರಶ್ಮಿ, ದಿವ್ಯ, ವಿಂದ್ಯಾ ವಿ.ಪ್ರಸಾದ್, ಮಂಜುನಾಥ್, ಮನೋಜ್‌ಕುಮಾರ್ ಮತ್ತು ಮನೋಹರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net