

ಕಾಸರಗೋಡು: ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನೋತ್ಸವ ನ.4ರಂದು ಕಾಸರಗೋಡು ಕನ್ನಡಗ್ರಾಮದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಸಿದ್ಧತಾ ಸಭೆ ಕನ್ನಡಗ್ರಾಮದಲ್ಲಿ ನಡೆಯಿತು.
ನಗರಸಭಾ ಸದಸ್ಯೆ ಶಾರದಾ ಅಧ್ಯಕ್ಷತೆ ವಹಿಸಿದ್ದರು. ಶಿವರಾಮ ಕಾಸರಗೋಡು, ಕೆ.ಎನ್.ವೆಂಕಟ್ರಮಣ ಹೊಳ್ಳ, ಕೆ.ನಿರಂಜನ ಕೊರಕ್ಕೋಡು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಜಯಾನಂದ ಕುಮಾರ್ ಹೊಸದುರ್ಗ, ಕೆ.ಗುರುಪ್ರಸಾದ್ ಕೋಟೆಕಣಿ, ಕೆ.ಮುರಳೀಧರ ಪಾರೆಕಟ್ಟೆ, ಕೆ.ಜಗದೀಶ ಕೂಡ್ಲು, ಯೋಗೀಶ್ ಕೋಟೆಕಣಿ, ಶ್ವೇತಾ ಯೋಗೀಶ್, ನಾರಾಯಣ ನಾಯ್ಕ ಪೆರ್ನೆ, ಕುಶಲ ಕುಮಾರ್ ಕೆ., ಶ್ರೀಕಾಂತ್ ಕಾಸರಗೋಡು ಮೊದಲಾದವರಿದ್ದರು.