ಪ್ರಶಸ್ತಿಗೆ ಸಾಹಿತಿಗಳ ಕಡೆಗಣನೆಗೆ ಆಕ್ರೋಶ

30_10_Mdy_Sathish Javare Gowda
Published on

ಮಂಡ್ಯ: ಜಿಲ್ಲಾಡಳಿತದಿಂದ ನೀಡಲಾಗುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರವನ್ನು ಕಡೆಗಣಿಸಿರುವುದಕ್ಕೆ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಹಿತ್ಯದ ಮೂಲಕ ಕನ್ನಡ ಪರಂಪರೆ ಬೆಳೆದಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರತಿಬಿಂಬವೇ ಸಾಹಿತ್ಯ. ನಾಡು ಮತ್ತು ನುಡಿ ಎಂದ ಕೂಡಲೇ ಕನ್ನಡ ಸಾಹಿತ್ಯ ಸಂಪತ್ತು ಮತ್ತು ಅದನ್ನು ಕಟ್ಟಿ ಬೆಳೆಸಿದ ಸಾಹಿತಿಗಳೇ ಅನುಗಾಲವೂ ನೆನಪಾಗುತ್ತಾರೆ. ಹೀಗಿರುವಾಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಒಬ್ಬ ಸಾಹಿತಿಯ ಹೆಸರು ಇಲ್ಲದಿರುವುದು ಅಪರಾಧ ಎಂದು ಕಿಡಿಕಾರಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಹಲವರು ಜಿಲ್ಲೆಯಲ್ಲಿದ್ದಾರೆ. ಇವರೆಲ್ಲ ಆಯ್ಕೆ ಸಮಿತಿಯ ಕಣ್ಣಿಗೆ ಬೀಳದಿರುವುದು ಅವರ ಸಂಕುಚಿತ ಜ್ಞಾನಕ್ಕೆ ಹಿಡಿದ ಕನ್ನಡಿ. ಈ ಅಸಮತೋಲನವನ್ನು ಸರಿಪಡಿಸಿ ಮಹಿಳಾ ಆದ್ಯತೆಯ ಜತೆಗೆ ಸಾಹಿತ್ಯ ಕ್ಷೇತ್ರದ ಕನಿಷ್ಟ ಮೂರು ಜನರನ್ನು ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net