

ಹಲಗೂರು: ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್‌ಅಭಿಮಾನಿಗಳ ಬಳಗ ವತಿಯಿಂದ ಸಮೀಪದ ಕೆ.ಪಿ.ಎಸ್. ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಶಾಸಕ ಡಾ.ಕೆ.ಅನ್ನದಾನಿ, ಪುನೀತ್ ಹೆಸರಲ್ಲಿ ರಾಜ್ಯೋತ್ಸವ ಆಚರಣೆ ಒಳ್ಳೆಯ ಬೆಳವಣಿಗೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಂಸಾಗರ ರವಿ ಮಾತಾನಾಡಿ, ಕರ್ನಾಟಕ ಗಡಿ ಭಾಗದಲ್ಲಿ ಹಲವು ದಿನಗಳಿಂದಲೂ ಮರಾಠಿ ಪುಂಡರು ಕನ್ನಡ ಮತ್ತು ಕರ್ನಾಟಕ ಆಸ್ತಿಯನ್ನು ಹಾಳು ಮಾಡುತ್ತಿದ್ದಾರೆ. ಈ ಘಟನೆ ಕನ್ನಡಿಗರ ಅಸ್ಮಿತೆಯನ್ನು ಕೆಣಕಿದಂತೆ. ದೇಶದ ರಕ್ಷಣೆ ಜತೆಗೆ ನಾಡು, ನುಡಿ, ನೆಲ, ಜಲ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.
ಮನ್‌ಮುಲ್ ನಿರ್ದೇಶಕ ವಿಶ್ವನಾಥ್ ಮಾತಾನಾಡಿದರು. ಶೈನಿಂಗ್ ಸ್ಟಾರ್ ಮೆಲೋಡಿ ಗಾಯ್ಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಗೀತಾ ಮತ್ತು ತಂಡದ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ನಟ ಲೋಕೇಂದ್ರ ಸೂರಿ ಹಾಗೂ ಬಿಗ್‌ಬಾಸ್ ಖ್ಯಾತಿಯ ನವಾಜ್, ಒಳ್ಳೆ ಹುಡುಗ ಪ್ರಥಮ್, ಕಿರುತೆರೆಯ ಮಜಾ ಭಾರತದ ಜಗದೀಶ್ ನೆರೆದಿದ್ದವರನ್ನು ರಂಜಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು. ಜೆಡಿಎಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಹಲಗೂರು ಹೋಬಳಿ ಘಟಕದ ಅಧ್ಯಕ್ಷ ತಮ್ಮಣ್ಣಗೌಡ, ತಾಲೂಕು ಹಿಂದುಳಿದ ಘಟಕದ ಅಧ್ಯಕ್ಷ ಸಿದ್ದಚಾರಿ, ಶ್ರೀಧರ್, ಸಿದ್ದರಾಜು, ಆನಂದ್‌ಕುಮಾರ್ ಇತರರು ಇದ್ದರು.