ಬುದ್ಧಿ, ಭಾವ, ಹೃದಯದಲ್ಲಿ ಕನ್ನಡ ತುಂಬಿರಲಿ: ಯುವ ಲೇಖಕ ಲೋಕೇಶ ಬೆಕ್ಕಳಲೆ ಹೇಳಿಕೆ

04M.D.R.2
Published on

ಮದ್ದೂರು: ಕನ್ನಡ ರಾಜ್ಯೋತ್ಸವ ಆಚರಣೆಗಷ್ಟೇ ಸೀಮಿತವಾಗಬಾರದು. ಅದು ಹೃದಯೋತ್ಸವ ಆಗಬೇಕು. ಪ್ರತಿಯೊಬ್ಬ ಕನ್ನಡಿಗರ ಬುದ್ಧಿ, ಭಾವ, ಹೃದಯದಲ್ಲಿ ಕನ್ನಡ ತುಂಬಿರಬೇಕು. ಕನಸು, ಮನಸುಗಳಲ್ಲಿ ಕನ್ನಡವೇ ಕಾಣಿಸಿಕೊಳ್ಳಬೇಕು ಎಂದು ಯುವ ಲೇಖಕ ಲೋಕೇಶ ಬೆಕ್ಕಳಲೆ ತಿಳಿಸಿದರು.
ತಾಲೂಕಿನ ಶಿವಾರಗುಡ್ಡದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕರ್ನಾಟಕ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಕರ್ನಾಟಕದಲ್ಲಿ ಕನ್ನಡವನ್ನೇ ಸ್ಥಾಪಿಸುತ್ತೇವೆ. ಉಳಿಸುತ್ತೇವೆ, ಬಾಳಿಸುತ್ತೇವೆ ಎಂದು ಪಣತೊಡಬೇಕು. ಕನ್ನಡ ಬದುಕಿದ್ದರೆ ನಾವು ಬದುಕಿರುತ್ತೇವೆ ಎಂದರು.
ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲರಾದ ಉಮಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ವಿಭಾಗದ ಮುಖ್ಯಸ್ಥ ನಾಯಕ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net