

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಜೈ ಭುವನೇಶ್ವರಿ ಆಟೋ ವಾಲೀಕರ ಸಂ ಹಾಗೂ ಗೂಡ್ಸ್ ವಾಹನ ವಾಲೀಕರ ಸಂದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮಾತನಾಡಿ, ಕನ್ನಡ ರಾಜ್ಯೋತ್ಸವ ನವೆಂಬರ್ ಮಾಸಕ್ಕೆ ಸೀಮಿತವಾಗಬಾರದು. ಕನ್ನಡವನ್ನು ಬೆಳೆಸುವ ಕೆಲಸ ಪ್ರತಿಯೊಬ್ಬ ಕನ್ನಡಿಗರಿಂದಲೂ ನಿರಂತರವಾಗಿ ಆಗಬೇಕು. ಪ್ರಾಚೀನ ಭಾಷೆಯಾಗಿರುವ ಕನ್ನಡ ವಿಶ್ವದಲ್ಲಿಯೇ ಕಂಪು ಬೀರಿದ್ದು, ವಿಶ್ವ ಸಾರಸತ್ವ ಲೋಕಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡಿದೆ ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಟ್ಟ ಮಾತನಾಡಿ, ಮೌಲ್ಯಾಧಾರಿತವಾಗಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ ವಾಡುತ್ತಿರುವುದು ಶ್ಲಾನೀಯ. ನಾಡು, ನುಡಿ, ಜಲ, ಗಡಿ ಮುಂತಾದ ವಿಚಾರಗಳಲ್ಲಿ ಯುವಕ ಮಿತ್ರರು ಇಟ್ಟಿರುವ ಅಭಿವಾನ ಮೆಚ್ಚುವಂತಹದ್ದಾಗಿದೆ ಎಂದು ಹೇಳಿದರು.
ಬಸರಾಳ ಶಂಕರೇಗೌಡ, ಆಟೋ ಚಾಲಕರ ಸಂದ ಅಧ್ಯಕ್ಷ ಸಂತೋಷ್, ವಿಜಿಕುಮಾರ್ ಇತರರಿದ್ದರು.