

ಮಂಡ್ಯ: ಹೆಚ್ಚು ಕನ್ನಡಾಭಿವಾನ ಹೊಂದಿರುವ ಮಂಡ್ಯದ ಸಂಸ್ಕೃತಿ ಮತ್ತು ಪರಂಪರೆ ಜಗತ್ತಿಗೆ ವಾದರಿ ಎಂದು ಕೇಂದ್ರ ಕಸಾಪ ವಾಜಿ ಅಧ್ಯಕ್ಷ ನಾಡೋಜ ಡಾ.ಮನುಬಳಿಗಾರ್ ಅಭಿಪ್ರಾಯಪಟ್ಟರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೂರು ದಿನಗಳ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸವಾರಂಭವನ್ನು ಉದ್ಘಾಟಿಸಿ ವಾತನಾಡಿದರು.
1974ರಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೂರದ ಉತ್ತರ ಕರ್ನಾಟಕದಿಂದ ಬಂದು ಭಾಗವಹಿಸಿದ ಸಂದರ್ಭದಲ್ಲಿ ಕನ್ನಡಾಭಿವಾನ ಮೂಡಿಸಿಕೊಳ್ಳಲು ಪ್ರೇರಣೆಯಾದದ್ದು ಇಲ್ಲಿನ ನೆಲ ಎಂದು ಸ್ಮರಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುವಾರ ಚಾಮಲಾಪುರ, ಡಾ.ಕೆ.ಚಂದ್ರಶೇಖರ್, ಎ.ಬಿ.ಬಸವರಾಜು, ಹುಸ್ಕೂರು ಕೃಷ್ಣೇಗೌಡ, ಡಾ.ಸಿ.ಕೆ.ಜಗದೀಶ್‌ಕುವಾರ್, ಬಿ.ಎಂ.ಅಪ್ಪಾಜಪ್ಪ, ಧನಂಜಯ ದರಸಗುಪ್ಪೆ, ಮಂಜು ಮುತ್ತೇಗೆರೆ, ಸುಜಾತಾಕೃಷ್ಣ, ಬಲ್ಲೇನಹಳ್ಳಿ ಮಂಜುನಾಥ್, ಬಸವೇಗೌಡ, ಭಾಸ್ಕರ್ ಇತರರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 30ಕ್ಕೂ ಹೆಚ್ಚು ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.