ಮಂಡ್ಯ ಜನರೇ ನಮಗೆ ಹೆಮ್ಮೆ: ಸಮಾಜಸೇವಕ ಅಣ್ಣೂರು ಚಂದ್ರೇಶ್ ಹೇಳಿಕೆ

Kannada Rajyotsava in Hodaghatta village mandya
Published on

ಮಂಡ್ಯ: ಇಡೀ ರಾಜ್ಯದಲ್ಲಿಯೇ ಕನ್ನಡ ಹೆಚ್ಚಾಗಿ ಮಾತನಾಡುವ ಮಂಡ್ಯ ಜಿಲ್ಲೆ ನಾಗರಿಕರ ಬಗ್ಗೆ ಹೆಮ್ಮೆ ಇದೆ ಎಂದು ದಾನಿ ಅಣ್ಣೂರು ಚಂದ್ರೇಶ್ ಹೇಳಿದರು.

ತಾಲೂಕಿನ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ರೋಟರಿ ಕೆ.ಎಂ.ದೊಡ್ಡಿ ಸೆಂಟ್ರಲ್ ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಶಬ್ಧಕೋಶ ವಿತರಿಸಿ ಮಾತನಾಡಿದ ಅವರು, ನಾನು ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದಾಗಲೂ ಕೂಡ ನಮ್ಮ ಭಾಷೆ, ನೆಲದ ಸೆಳೆತ ಹೆಚ್ಚಾಗಿತ್ತು. ಇದು ನಮ್ಮ ಕನ್ನಡಾಂಬೆ ಶಕ್ತಿ. ಎಂದಿಗೂ ನಮ್ಮ ತನು, ಮನ, ಧನ ಎಲ್ಲವೂ ಕನ್ನಡವಾಗಿರಬೇಕು. ನಾವು ಅನೇಕ ಸ್ಥಳಗಳಲ್ಲಿ ಕನ್ನಡದಲ್ಲೇ ಮಾತುಕತೆ, ಕನ್ನಡ ಹಬ್ಬ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ದಾನಿ ಸವಿತಾ ಚಂದ್ರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಮಹೇಶ್, ಸದಸ್ಯರಾದ ಎ.ಚಂದ್ರ, ಆನಂದ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷೆ ಶ್ವೇತಾ, ಪ್ರಭಾರಿ ಮುಖ್ಯ ಶಿಕ್ಷಕ ಕೆ.ಟಿ.ನಾರಾಯಣ ರಾಜೇಅರಸ್, ಸಹ ಶಿಕ್ಷಕರಾದ ಡಿ.ಎಸ್.ಕೃಷ್ಣೇಗೌಡ, ಕೆ.ಆರ್.ಶಶಿಧರ ಈಚಗೆರೆ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ, ಎನ್.ಕೆ.ಪವಿತ್ರಾ ಇತರರಿದ್ದರು. ಇದೇ ವೇಳೆ ಅಣ್ಣೂರು ಚಂದ್ರೇಶ್ ಮತ್ತು ಸವಿತಾ ದಂಪತಿ ವಿದ್ಯಾರ್ಥಿಗಳಿಗೆ 22 ಶಬ್ಧಕೋಶ ವಿತರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net