ವಿದ್ಯುತ್ ಪ್ರಸರಣ ನಿಗಮದ ಲೆಕ್ಕಾಧಿಕಾರಿಗಳ ಸಂಘದಲ್ಲಿ ಕನ್ನಡ ರಾಜ್ಯೋತ್ಸವ

kvpn
Published on

ಬೆಂಗಳೂರು: ಆನಂದರಾವ್ ವೃತ್ತದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ದ ಲೆಕ್ಕಾಧಿಕಾರಿಗಳ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಕಾಶವಾಣಿಯ ನಿವೃತ್ತ ನಿರ್ದೇಶಕ, ಡಾ. ಬಸವರಾಜ ಸಾದರ ಮಾತನಾಡಿ, ಕವಿರಾಜ ಮಾರ್ಗದಲ್ಲಿ ಕನ್ನಡ ಸಂಸ್ಕೃತಿಯ ಮಹತ್ವ ಹೇಗೆ ಪ್ರಸ್ತುತಗೊಂಡಿತ್ತು, ಯಾವುದು ನಿಜವಾದ ಕನ್ನಡ ಸಂಸ್ಕೃತಿ, ಯಾವುದು ವಿಕೃತಿ ಎಂಬದನ್ನು ಅರ್ಥಮಾಡಿಕೊಂಡು ಕನ್ನಡ ನಾಡು ನುಡಿ ಕಟ್ಟಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ತುಮಕೂರು ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಶ್ರೀಧರ್ ಶಾಸ್ತ್ರೀ ಕರ್ನಾಟಕದ ಮೇರು ಪರುಷರು ಮಾಲಿಕೆಯ ಉಪನ್ಯಾಸದಲ್ಲಿ ಸಿದ್ದಗಂಗೆಯ ಸಿದ್ದಿ ಪುರುಷ ಶ್ರೀಶಿವಕುಮಾರ ಸ್ವಾಮಿಗಳ ಕೊಡುಗೆ, ಜೀವನ ಶೈಲಿ, ಸಮಾಜಕ್ಕೆ ಸಲ್ಲಿಸಿದ ಸೇವೆ ಕುರಿತು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜೇಶ್ವರಿ ಸಾದರ ಹಾಗೂ ಕವಿತಾ ಸಾದರ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ನಾಡಗೀತೆ ಹಾಗೂ ವಚನಗಳ ಗಾಯನ ನಡೆಸಿಕೊಟ್ಟರು.

ಸಮಾರಂಭದಲ್ಲಿ ಭೂಮಿ ಪ್ರಕಾಶನದ ವಿಶಾಲಕ್ಷಿ ಶರ್ಮ, ನಿವೃತ್ತ ಪ್ರಾಚಾರ್ಯ ಜಿ. ವಿ. ಹೆಗಡೆ.

ಡಾ. ಅಂಬುಜಾಕ್ಷಿ ಬೀರೇಶ್, ನಿವೃತ್ತ ಮುಖ್ಯ ಇಂಜಿನಿಯರ್ ನಂಜುಂಡಸ್ವಾಮಿ, ಕವಿಗಳಾದ ಕಾಶೀನಾಥ್ ಹಂದ್ರಾಳ, ಕೊಪ್ಪರಂ ಅನ್ನಪೂರ್ಣ, ಹೇಮಂತ, ಸಂಘದ ಹಿರಿಯ ಸದಸ್ಯರುಗಳಾದ ಬಿ. ಸತ್ಯನಾರಾಯಣ, ಉಲಿಗೆಸ್ವಾಮಿ, ಎಸ್.ಜೆ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net