ಕನ್ನಡ ರಾಜ್ಯೋತ್ಸವ ಎಲ್ಲೆಡೆ ಹಬ್ಬದಂತೆ ಆಚರಣೆಯಾಗಲಿ: ಆಲಕೆರೆ ಗ್ರಾಪಂ ಅಧ್ಯಕ್ಷ ಕೆ.ಶಶಿಧರ್ ಹೇಳಿಕೆ

Kannada Rajyotsava in Alakere village mandya
Published on

ಮಂಡ್ಯ: ಕನ್ನಡ ರಾಜ್ಯೋತ್ಸವವನ್ನು ಹಳ್ಳಿ, ಪಟ್ಟಣ ಹಾಗೂ ನಗರದಲ್ಲಿ ಹಬ್ಬದಂತೆ ಆಚರಿಸಬೇಕೆಂದು ಆಲಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶಶಿಧರ್ ಹೇಳಿದರು.

ತಾಲೂಕಿನ ಕೆರಗೋಡು ಹೋಬಳಿ ಆಲಕೆರೆ ಗ್ರಾಮದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು. ಆಟೋ ಚಾಲಕರು ಮಾತ್ರ ಕನ್ನಡದ ಅಭಿಮಾನಿಗಳಾಗಿ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸುತ್ತಾರೆ. ಇತ್ತೀಚೆಗೆ ಹಳ್ಳಿಗಳಲ್ಲಿಯೂ ಇಂಗ್ಲಿಷ್ ಮೋಹ ಹೆಚ್ಚಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯನ್ನು ಸರಿಯಾಗಿ ಕಲಿಯದೆ ಅತಂತ್ರರಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲೇಖಕ ಪ್ರೊ.ಸಿ.ಸಿದ್ದರಾಜು ಆಲಕೆರೆ, ಇಂಜಿನಿಯರ್ ಎ.ಸಿ.ರುದ್ರಯ್ಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದ ಸಿ.ಚೇತನ್‌ಕುಮಾರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಸಂಘದ ಮಂಡ್ಯ ಘಟಕದ ಕಾರ್ಯದರ್ಶಿ ಸತ್ಯಮೂರ್ತಿ, ಆಲಕೆರೆ ಘಟಕದ ಅಧ್ಯಕ್ಷ ಚಂದ್ರು, ಮದ್ದೂರಿನ ಸಮಾಜ ಸೇವಕಿ ಸಿಂಧುದೀಪಕ್, ಕರುನಾಡ ವಿಜಯಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಆರ್.ಎಸ್.ಮಹೇಶ್, ಮುಖಂಡರಾದ ಪ್ರದೀಪ್, ವಾಗೀಶ್ ಚಂದ್ರಗುರು, ಸತ್ಯಾನಂದ, ಎ.ವಿ.ಚನ್ನವೀರಯ್ಯ, ನಾರಾಯಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net