ಕಿನ್ನಿಗೋಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಸಾಧಕರಿಗೆ ಪುರಸ್ಕಾರ : ಸಾಂಸ್ಕೃತಿಕ ಕಾರ್ಯಕ್ರಮ

New Project (14)
Published on

ಕಿನ್ನಿಗೋಳಿ: ಯುಗಪುರುಷ ಸಂಸ್ಥೆ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಗರಿ ರಾಘವೇಂದ್ರ ರಾವ್, ಕರ್ನಾಟಕ ಜಾನಪದ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್, ಕಾ.ವೀ.ಕೃಷ್ಣದಾಸ, ರಾಜೇಂದ್ರಪ್ರಸಾದ್ ಎಕ್ಕಾರು , ದಾಯ್ಜಿವರ್ಲ್ಡ್‌ನ ಹೇಮಾಚಾರ್ಯ ಮೂರುಕಾವೇರಿ, ಆಳ್ವಾಸ್ ಕಾಲೇಜು ಉಪನ್ಯಾಸಕಿ ಡಾ.ಸುಧಾರಾಣಿ, ಪ್ರಮುಖರಾದ ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತಿ ಮೋಹನದಾಸ ಸುರತ್ಕಲ್ ಅವರು ಕನ್ನಡ ಭಾಷೆ ಉಳಿಸಿ ಬೆಳೆಸೋಣ ವಿಷಯದಲ್ಲಿ ಉಪನ್ಯಾಸ ನೀಡಿದರು. ಶರತ್ ಶೆಟ್ಟಿ ನಿರೂಪಿಸಿದರು. ಬಳಿಕ ವಾಯ್ಸ ಆಫ್ ಆರಾಧನಾ ತಂಡದವರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಶಶಿಕಲಾ ಕೆಮ್ಮಡೆ ಅವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು.

ರಾಜ್ಯೋತ್ಸವ ಪುರಸ್ಕಾರ

ಹಿರಿಯ ಸಾಹಿತಿ, ವಾಸ್ತುತಜ್ಞ ಡಾ.ಪದ್ಮನಾಭ ಭಟ್ ಎಕ್ಕಾರು, ಹಿರಿಯ ತಜ್ಞ ವ್ಯವಸಾಯಗಾರ ಭೋಜ ದೇವಾಡಿಗ ಎಣ್ಣೆಗೇರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಪ್ರಕಾಶ್ ಆಚಾರ್ಯ, ಪದ್ಮನಾಭ ಪಕ್ಷಿಕೆರೆ, ವಿಜಯ ಯುವಕ ಮಂಡಲ ಮತ್ತು ಖುಷಿ ಮಹಿಳಾ ಮಂಡಲ ಸಂಕಲಕರಿಯ, ಪತ್ರಕರ್ತ ಪ್ರಕಾಶ್ ಸುವರ್ಣ ಅವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net