

ಮೈಸೂರು: ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ನಗರದ ಬೋಗಾದಿಯ ರೈಲ್ವೆ ಬಡಾವಣೆಯ ಶರಣು ಕುಟೀರದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಅನ್ಯ ಭಾಷಿಗರಿಗೂ ಕನ್ನಡ ಕಲಿಸಿ ವಚನ ರಚಿಸಲು ಪ್ರೇರಣೆ ನೀಡಿದ ಬಸವಣ್ಣನವರ ಕನ್ನಡಾಭಿಮಾನ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಯೂರಬೇಕು ಎಂದರು.
ಐದನೇ ಶತಮಾನದಿಂದಲೇ ಬಳಕೆಯಲ್ಲಿದ್ದರೂ ಕನ್ನಡದ ನಿಜವಾದ ಉತ್ಸವ ಪ್ರಾರಂಭವಾದದ್ದು ಹನ್ನೆರಡನೆಯ ಶತಮಾನದಲ್ಲಿ. ಏಕೆಂದರೆ ಓದು ಬರಹ ಬಾರದ ವಿವಿಧ ಕಾಯಕಗಳಲ್ಲಿ ತೊಡಗಿಕೊಂಡಿದ್ದ ಕಾಯಕ ಜೀವಿಗಳನ್ನು ಅನುಭವ ಮಂಟಪದಲ್ಲಿ ಕಲೆಹಾಕಿ ಅವರೂ ವಚನ ಸಾಹಿತ್ಯ ರಚಿಸಲು ಪ್ರೇರಣೆ ನೀಡಿದರು ಎಂದರು.
ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್‌ಕುಮಾರ್ ವಾಜಂತ್ರಿ ಮಾತನಾಡಿದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಸಮವಸ್ತ್ರ ದಾಸೋಹಿಗಳಾದ ಶಿವಪುರ ಉಮಾಪತಿ, ವಚನ, ಗಿರಿಜೇಶ್, ನಿಜಗುಣ, ಮಂಜುಳಾ, ಕಾವ್ಯಾ, ಸಾದನಾ, ಚಂದ್ರು, ಬಿ.ಆರ್. ಕಾವ್ಯಾ ಉಪಸ್ಥಿತರಿದ್ದರು.