

ಮಂಡ್ಯ: ನಗರದ ಪತ್ರಿಕಾ ಭವನದಲ್ಲಿ ವೈಸಿಡಬ್ಲ್ಯು ಬಿಗ್ ಮಾರ್ಟ್ ನಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಖ್ಯಾತ ವೈದ್ಯ ಡಾ.ಶಂಕರೇಗೌಡ, ನಾವು ಮಾತನಾಡುವ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಅದರಂತೆ ಪ್ರತಿಯೊಬ್ಬರು ಇಲ್ಲಿ ಕನ್ನಡವನ್ನು ಕಲಿಯಬೇಕು. ಅರ್ಥವಾಗದ ಭಾಷೆಯಲ್ಲಿ ವ್ಯವಹಾರ ಮಾಡುವುದರಿಂದ ವ್ಯಾಪಾರ ವಹಿವಾಟು ಕಷ್ಟವಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಯಾವುದಾದರೂ ಭಾಷೆ ಇದ್ದರೆ ಅದು ಕನ್ನಡ ಮಾತ್ರ. ಕುವೆಂಪು ಅವರ ಆದರ್ಶದಂತೆ ನಮ್ಮ ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದರ ಜತೆಗೆ ಎಲ್ಲ ಭಾಗದಲ್ಲೂ ಸಹ ಕನ್ನಡವನ್ನ ಬಳಸುವಂತಹ ಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಪ್ರಶಾಂತ್, ವಕೀಲ ಜೆ.ರಾಮಯ್ಯ, ಬಿಗ್‌ಮಾರ್ಟ್ ನಿರ್ದೇಶಕರಾದ ರಮೇಶ್‌ಗೌಡ , ಪುಟ್ಟರಾಜು ಇತರರಿದ್ದರು.