

ಕೊಪ್ಪಳ:ಕನ್ನಡ ರಾಜ್ಯೋತ್ಸವವನ್ನು ಕುಕನೂರು ಪಟ್ಟಣದ ಸಾರಿಗೆ ಬಸ್ ನೌಕರರು ಬಸ್‌ನಲ್ಲಿ ಕನ್ನಡ ಗೀತ ಗಾಯನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ಕುಕನೂರು-ಹುಬ್ಬಳ್ಳಿ ಬಸ್‌ನ ನಿರ್ವಾಹಕ ಅಶೋಕ ಭಂಗಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದರು. ಬಸ್ ಅಲಂಕಾರಗೊಳಿಸಿದ್ದು, ತಮ್ಮ ಕೆಲಸದೊಂದಿಗೆ ದಾರಿಯುದ್ದಕ್ಕೂ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಪ್ರಯಾಣಿಕರನ್ನು ರಂಜಿಸಿದರು.
ಬಸ್ ಹತ್ತುವ ಪ್ರಯಾಣಿಕರಿಗೆ ಕನ್ನಡ ಶಾಲು ಹಾಕಿ ಸ್ವಾಗತಿಸಿದರು. ಸಿಹಿ ನೀಡಿ ಶುಭ ಕೋರಿದರು. ಕನ್ನಡಾಂಬೆ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಸ್‌ನಲ್ಲಿ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಹಾಡುಗಳನ್ನು ಹಾಡಿ,
ಕುಣಿವಮೂಲಕ ಕನ್ನಡ ಪ್ರೇಮ ಮೆರೆದರು. ಸಾರಿಗೆ ಸಿಬ್ಬಂದಿ ಈ ವಿಶೇಷ ಆಚರಣೆ ಪ್ರಯಾಣಿಕರನ್ನು ಸೆಳೆಯಿತು.