ಬೋಗಾದಿಯ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

Kannada Rajyotsava celebrated with grandeur at Amrutha University in Bogadi
Published on

ಮೈಸೂರು: ನಗರದ ಬೋಗಾದಿಯ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಆರ್‌ಜೆ ಸುನಿಲ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನ್ಯ ಭಾಷೆಗಳನ್ನು ಕಲಿಯುವುದು ಅವಶ್ಯಕ. ಆದರೆ, ಎಷ್ಟೇ ಭಾಷೆಗಳನ್ನು ಕಲಿತರೂ, ನಾವು ಎಂದಿಗೂ ನಮ್ಮ ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಇಂದಿನ ಯುವ ಪೀಳಿಗೆ ಕನ್ನಡದಿಂದ ದೂರವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಬಳಕೆಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಅಂತೆಯೇ ಕನ್ನಡ ನಾಡು-ನುಡಿಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಬೆಳೆಸಲು ಶಿಕ್ಷಕರು ಹಾಗೂ ಶಾಲಾ-ಕಾಲೇಜುಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಬ್ರಹ್ಮಚಾರಿ ನಿಷ್ಕಾಮಾಮೃತ ಚೈತನ್ಯ ಮಾತನಾಡಿ, ಮಾತೃಭಾಷೆಯ ಪ್ರೀತಿ ಏಕೆ ಕಡಿಮೆಯಾಗುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಗಳ ಮೂಲ ಮಾತೃಭಾಷೆ. ಹಾಗಾಗಿ ಮಾತೃಭಾಷೆಯನ್ನುಕೀಳಾಗಿ ಕಾಣದೇ ಅಭಿಮಾನದಿಂದ ಬಳಸಬೇಕು ಎಂದು ಕರೆನೀಡಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ನೃತ್ಯ ಪ್ರದರ್ಶನ ನಡೆಯಿತು. ಕೆಂಪು ಹಾಗೂ ಹಳದಿ ಬಣ್ಣಗಳ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟಿದ್ದ ವಿದ್ಯಾರ್ಥಿಗಳ ಸಂಭ್ರಮ ಕ್ಯಾಂಪಸ್‌ನಲ್ಲಿ ಕಳೆ ತಂದಿತ್ತು.

ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಅನಂತಾನಂದ ಚೈತನ್ಯ, ಸಂಚಾಲಕ ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ, ಪ್ರಾಂಶುಪಾಲ ಪ್ರೊ.ಜಿ.ರವೀಂದ್ರನಾಥ್, ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಕಾಲೇಜಿನ ಶೈಕ್ಷಣಿಕ ಸಂಯೋಕಿ ಡಾ. ರೇಖಾ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net