ತಾಯಿಯಂತೆ ಕನ್ನಡವನ್ನು ಗೌರವಿಸಿ

2-pnp 3
Published on

ಮಂಡ್ಯ: ನೆಲ, ಜಲ, ಭಾಷೆಗಾಗಿ ಕನ್ನಡಾಭಿಮಾನಿಗಳು ಹಾಗೂ ಹೋರಾಟಗಾರರು ತಮ್ಮ ಜೀವವನ್ನು ಸಮರ್ಪಣೆ ಮಾಡಿದ ವಿಜಯದ ದಿವಸವೇ ಕನ್ನಡ ರಾಜ್ಯೋತ್ಸವ ದಿನ ಎಂದು ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಿಸಿದರು.
ಪಾಂಡವಪುರ ತಾಲೂಕು ಬೇಬಿ ಗ್ರಾಮದ ಯುವಕರ ಬಳಗ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜರೋಹಣ ನೆರವೇರಿಸಿ ಅವರು ಯುವಕರಿಗೆ ಸಂದೇಶ ನೀಡಿದರು. ಪ್ರತಿಯೊಬ್ಬರು ತಮ್ಮ ಮನೆಯನ್ನು ಪ್ರೀತಿಸುವ ರೀತಿ, ತಾಯಿಗೆ ನೀಡುವ ಗೌರವದಂತೆ ಕನ್ನಡಕ್ಕೂ ಗೌರವ ಸಲ್ಲಿಸಬೇಕು ಎಂದರು.
ಪತ್ರಕರ್ತರಾದ ವಿಶ್ವನಾಥ್ ಹಾಗೂ ರವೀಂದ್ರ ಅವರನ್ನು ಸನ್ಮಾನಿಸಲಾಯಿತು.ಪ್ರಜ್ವಲ್, ಅಜಯ್‌ಗೌಡ, ಸಂಜಯ್, ಆನಂದ, ಪ್ರಸನ್ನ, ಚಂದ್ರ, ಹೇಮಂತ್ ಸೇರಿದಂತೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net