ನಾಡು-ನುಡಿ ರಕ್ಷಣೆಗೆ ಯುವಕರ ಪಾತ್ರ ಮುಖ್ಯ

Kannada Rajyotsava
Kannada Rajyotsava
Published on

ಚನ್ನರಾಯಪಟ್ಟಣ: ಕನ್ನಡ ನಾಡು-ನುಡಿ, ಜಲ, ಸಂಸ್ಕೃತಿ ಉಳಿಯಬೇಕಾದರೆ ಯುವಕರ ಪಾತ್ರ ಅತಿಮುಖ್ಯ ಎಂದುದೇವರಾಜ್ ಹೇಳಿದರು.
ಹೋಬಳಿಯ ನಲ್ಲೂರು ಸರ್ಕಲ್‌ನಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಗೂ ನಲ್ಲೂರು ಯುವಕರ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ, ನಾಡು-ನುಡಿಯ ಬಗ್ಗೆ ಯುವಕರು ಹೆಚ್ಚಿನ ಕಾಳಜಿ ವಹಿಸಿದರೆ ನಾಡು-ನುಡಿ ಬೆಳೆಯುತ್ತದೆ. ರಾಜ್ಯದ ಐಟಿಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸಿಗುವಂತಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net