ವರೂರ ಎಜಿಎಂನಲ್ಲಿ ಸಂಭ್ರಮದ ರಾಜ್ಯೋತ್ಸವ

IMG-20241117-WA0006.jpg
Published on

ಹುಬ್ಬಳ್ಳಿ: ತಾಲೂಕಿನ ವರೂರ ಎ.ಜಿ.ಎಂ. ತಾಂತ್ರಿಕ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ಕ್ಲಬ್ ಆಶ್ರಯದಲ್ಲಿ ಶನಿವಾರ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಿರ್ದೇಶಕ ಸಂದೀಪ ಕ್ಯಾತನವರ್ ಮಾತನಾಡಿ, ರಾಜ್ಯೋತ್ಸವದ ಪ್ರಾಮುಖ್ಯತೆ ವಿವರಿಸಿದರು.
ಪತ್ರಕರ್ತ ಸುಶಿಲೇಂದ್ರ ಕುಂದರಗಿ, ಕನ್ನಡ ಸಾಹಿತ್ಯ ಮತ್ತು ಸಂಸತಿಯ ಬೆಳವಣಿಗೆ ಕುರಿತು ಮಾತನಾಡಿದರು.

ಎನ್ಎಸ್ಎಸ್ ಸಂಚಾಲಕ ಚಾಮರಾಜ ರಾಥೋಡ್ ಅವರ ತಂಡದವರು ಕಾರ್ಯಕ್ರಮ ನಿರ್ವಹಣೆ ಮಾಡಿ, ರಂಗೋಲಿ ಪಿಕ್ ಮತ್ತು ಸ್ಪೀಕ್- ಹಾಡುಗಳು,- ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತರಿಗೆ ಪಾರಿತೋಷಕ ವಿತರಿಸಲಾಯಿತು.

ಬಿಸಿಎ ಕಾಲೇಜಿನ ಪ್ರಾಚಾರ್ಯ ಶ್ವೇತಾ ಕೆ., ಪಾಲಿಟೆಕ್ನಿಕ್ ಪ್ರಾಚಾರ್ಯ ಸಂದೀಪ ಎಸ್.ಎಂ., ಕರುನಾಡ ಹಣತೆ ಕಾರ್ಯದರ್ಶಿ ಬಸವರಾಜ ವಿ., ಮಾರುತಿ ಟಿ, ವಿಜಯಲಕ್ಷ್ಮಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net