ಕರುನಾಡ ಸೇನೆಯಿಂದ ಕನ್ನಡ ರಾಜ್ಯೋತ್ಸವ

Kannada Rajyostava
Published on

ಬೆಂಗಳೂರು: ರಾಜ್ಯಸರ್ಕಾರ ಭುವನಗಿರಿ ಉತ್ಸವ ಆಚರಿಸಬೇಕು. ನಾಡಿನಲ್ಲಿ ಹಿಂದಿಭಾಷೆಯನ್ನು ಜಾರಿಗೆ ತರದಂತೆ ಕ್ರಮ ವಹಿಸಬೇಕು, ಕೇಂದ್ರ ಹಾಗೂ ರಾಜ್ಯಸರ್ಕಾರದ ವಿವಿಧ ಇಲಾಖೆ, ಖಾಸಗಿ ಕಂಪನಿಗಳಲ್ಲಿ ಶೇ.75 ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವ ಸಂಬಂಧ ಕಾನೂನು ಜಾರಿಗೆ ತರಬೇಕೆಂದು ಕರುನಾಡ ವಿಜಯ ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್. ದೀಪಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರುನಾಡ ವಿಜಯಸೇನೆ ರಾಜ್ಯ ಘಟಕವು ಗಾಣಿಗರಪಾಳ್ಯ ಸಮೀಪದ ಹೊಸಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ರಾಜ್ಯೋತ್ಸವ ಮತ್ತು ಶಂಕರ್ ನಾಗ್ ಉತ್ಸವ’ದಲ್ಲಿ ಪೌರಕಾರ್ಮಿಕರು, ಬಡವರಿಗೆ ಸೀರೆ ವಿತರಣೆ ಮತ್ತು ಆಟೋ ಚಾಲಕರಿಗೆ ಸಮವಸ್ತ್ರ, ಬಡವರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.

ನ್ಯಾಯಾಲಯದ ತೀರ್ಪು ಕನ್ನಡದಲ್ಲಿ ಬರಬೇಕು, ಅನ್ಯರಾಜ್ಯದ ಕಂಪೆನಿಗಳು ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಉಗ್ರಹೋರಾಟ ನಡೆಸಲಾಗುವುದು. ಹಿಂದಿಭಾಷೆ ರಾಜ್ಯದಲ್ಲಿ ಜಾರಿಗೆಯಾದರೆ ರಕ್ತಪಾತ ಮಾದರಿಯಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು

ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಜಾನಪದ ಕಲಾಉತ್ಸವ, ಭುವನೇಶ್ವರಿ ದೇವಿಯ ಮೆರವಣಿಗೆ ಚಾಲನೆ ನೀಡಿ, ಕನ್ನಡಿಗರು ವಿಶಾಲ ಹೃದಯವಂತರು ನಾಡು,ನುಡಿ,ಭಾಷೆ,ಜೊತೆಗೆ ಅನ್ಯಭಾಷಿಕರಿಗೂ ಬದುಕಲು ಅವಕಾಶ ಮಾಡಿಕೊಟ್ಟಿದ್ದು, ನಮ್ಮನ್ನು ಪರೀಕ್ಷಿಸದೆ ನಮ್ಮ ಸಂಸ್ಕೃತಿ ಪಾಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದರು.

ವಿಜಯಸೇನೆ ರಾಜ್ಯಕಾರ್ಯದರ್ಶಿ, ಆಟೋಘಟಕದ ಉಸ್ತುವಾರಿ ಗಿರಿಜೇಶ್, ರಾಜ್ಯದಲ್ಲಿ ಕನ್ನಡ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಟೋಚಾಲಕರನ್ನು ಸನ್ಮಾನಿಸಿದರು. ಸೇನೆಯ ರಾಜ್ಯಯುವ ಘಟಕ ಅಧ್ಯಕ್ಷ ಆರ್.ಎಸ್. ಮಹೇಶ್, ಕಾರ್ಯಧ್ಯಕ್ಷ ತರುಣ್ ರಾಜ್, ಗೋವಿಂದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net