ಜೈನರಿಂದ ಕನ್ನಡ ಕಾವ್ಯ ಪರಂಪರೆ ಶ್ರೀಮಂತ

ಹೂವಿನಹಡಗಲಿಯಲ್ಲಿ ಲೇಖಕಿ ನಾಗಮಂಜುಳಾ ಜೈನ್ ಅವರ 108 ಭಕ್ತಿ ಗೀತೆಗಳ ‘ಜೀನಗಾನ’ ಕೃತಿಯನ್ನು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಬಿಡುಗಡೆ ಮಾಡಿದರು. ಲೇಖಕಿ ನಾಗಮಂಜುಳಾ ಜೈನ್, ಗರಗ ನಾಗಲಾಪುರ ಮಠದ ನಿರಂಜನ ಪ್ರಭು ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಜ್ವಾಲಾಮಾಲಿನಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾವತಿ ಇತರರಿದ್ದರು.

Published on

ಹೂವಿನಹಡಗಲಿ: ಕನ್ನಡ ಕಾವ್ಯ ಪರಂಪರೆಯಲ್ಲಿ ಜೈನರು ಮೊದಲಿಗರಾಗಿದ್ದಾರೆ ಎಂದು ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಹೇಳಿದರು.

ಪಟ್ಟಣದ ಗವಿಸಿದ್ದೇಶ್ವರ ಶಾಖಾ ಮಠದ 30ನೇ ವರ್ಷದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶನಿವಾರ ಲೇಖಕಿ ನಾಗಮಂಜುಳಾ ಜೈನ್ ಅವರ 108 ಭಕ್ತಿ ಗೀತೆಗಳ ‘ಜೀನಗಾನ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಶಬ್ದಮಣಿ ದರ್ಪಣ, ಶಬ್ದಸ್ಮತಿ, ಛಂದೋಂಬುಂಧಿ, ವಸ್ತುಕೋಶ, ಗಜಶಾಸ್ತ್ರ, ಗಣಿತಶಾಸ್ತ್ರಗಳಂತ ಕೃತಿಗಳ ಮೂಲಕ ಜೈನರು ಕನ್ನಡದ ಎಲ್ಲ ಕಾವ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ಭರತೇಶ ವೈಭವ, ಸಂಯುಕ್ತ ಕೌಮುದಿ, ವಜ್ರಕುಮಾರ ಚರಿತೆ, ಸಾಂಗತ್ಯ ಪ್ರಕಾರಗಳಿಂದ ದೇಸಿ ಪರಂಪರೆ ಬೆಳೆಸಿದ್ದಾರೆ ಎಂದರು.

ಗರಗ ನಾಗಲಾಪುರ ಮಠದ ನಿರಂಜನ ಪ್ರಭು ಸ್ವಾಮೀಜಿ, ಲೇಖಕಿ ನಾಗಮಂಜುಳಾ ಜೈನ್, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಜ್ವಾಲಾಮಾಲಿನಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾವತಿ, ಕೊಪ್ಪಳದ ರಥ ಶಿಲ್ಪಿ ಡಾ.ಜಿ.ಯಲ್ಲಪ್ಪ ಬಡಿಗೇರ, ಪ್ರಾಚಾರ್ಯ ಎಂ.ಈಶ್ವರ, ಪ್ರಮುಖರಾದ ಪದ್ಮಾವತಿ ದೇವೇಂದ್ರಪ್ಪ ಜೈನ್, ಕಿನ್ನಾಳದ ಮರಿಯಪ್ಪ ದಾನಪ್ಪ ಅಂಬಿಗೇರ, ಎಚ್.ಎಂ.ಜ್ಯೋತಿ, ಸವಿತಾ, ನಾಗವೇಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net