ಮೈಸೂರು: ಬೋಗಾದಿಯ ಸನ್ವಿತಿ ಪ್ರಕಾಶನದಿಂದ ಅ.26ರಂದು ಕನ್ನಡ ಕಾವ್ಯ ಸಂಭ್ರಮ, ಪುಸ್ತಕ ಲೋಕಾರ್ಪಣೆ ಹಾಗೂ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಸರಸ್ವತಿಪುರಂನಲ್ಲಿರುವ ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮವನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸುವರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್‌ಜವರೇಗೌಡ ಅವರು ಸಾಹಿತಿ ಬಸಪ್ಪ ಸಿ.ಸಾಲುಂಡಿ ವಿರಚಿತ ‘ಕರುನಾಡ ಕೌತುಕ ಕಾರಂತಜ್ಜ’ ಮತ್ತು ‘ಹೊನ್ನೇರು’ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಮೈಸೂರು ಕೃಷ್ಣಮೂರ್ತಿ ಅವರ ಪುಸ್ತಕಗಳ ಕುರಿತು ಮಾತನಾಡುವರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮಹದೇವ ಮೂರ್ತಿ ಅವರು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವರು. ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಎನ್. ನಾಗೇಂದ್ರ, ಭವಾನಿ ಅಸೋಸಿಯೇಟ್ಸ್ ಮಾಲೀಕ ಎನ್.ಡಿ. ಶ್ರೀನಿವಾಸ್, ನಗರ ಪಾಲಿಕೆಯ ಮಾಜಿ ಸದಸ್ಯ ಜೆ.ಗೋಪಿ, ಉದ್ಯಮಿ ಹರೀಶ್‌ಕುಮಾರ್, ಕೃತಿಕಾರ ಬಸಪ್ಪ ಸಿ. ಸಾಲುಂಡಿ ಭಾಗವಹಿಸಲಿದ್ದಾರೆ.
ಶಿವಮೊಗ್ಗದ ಹಿರಿಯ ಸಾಹಿತಿ ಡಾ. ಸರ್ಜಾ ಶಂಕರ್ ಹರಳಿಮಠ ಅವರಿಗೆ ಕನಕ ಸಾಹಿತ್ಯ ಪ್ರಶಸ್ತಿ, ಬೆಂಗಳೂರಿನ ಜೀವನ್ಮುಖಿ ಸುರೇಶ್ ಅವರಿಗೆ ಡಾ.ಶಿವರಾಮ ಕಾರಂತ ಮಾಧ್ಯಮ ಪ್ರಶಸ್ತಿ, ಡಾ. ಎನ್.ವಿ. ಮನೋಜ್‌ಕುಮಾರ್ ಅವರಿಗೆ ಸನ್ವಿತಿ ಶಿಕ್ಷಣ ಪ್ರಶಸ್ತಿ, ಅಂಬಳೆ ಮಹದೇವಸ್ವಾಮಿ ಅವರಿಗೆ ಸನ್ವಿತಿ ಸಾಹಿತ್ಯ ಪ್ರಶಸ್ತಿ, ಶಿಕ್ಷಕ ದೊರೆಸ್ವಾಮಿ ಸಾಲುಂಡಿ ಅವರಿಗೆ ಸನ್ವಿತಿ ಶಿಕ್ಷಣ ಪ್ರಶಸ್ತಿ, ಗಾಯಕ ಅಮ್ಮ ರಾಮಚಂದ್ರ ಅವರಿಗೆ ಸನ್ವಿತಿ ಜಾನಪದ ಪ್ರಶಸ್ತಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿಗಳ ಪ್ರದಾನ ಮಾಡಲಾಗುವುದು.
ಕವಯತ್ರಿ ಸುಚಿತ್ರ ಹೆಗಡೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಕವಯತ್ರಿ ಕೆ.ಸಿ. ರತ್ನಶ್ರೀ ಶ್ರೀಧರ್ ಆಶಯ ನುಡಿಗಳನ್ನಾಡುವರು. ಕವಿಗೋಷ್ಠಿಯಲ್ಲಿ ಸೌಗಂಧಿಕ ಜೋಯಿಸ್, ನಾಗೇಂದ್ರ ಹೆಬ್ಬಾರ, ಪ್ರಭಾವತಿ ಶೆಡ್ತಿ, ಸಿ.ಎಸ್.ರಾಘವೇಂದ್ರ, ಕೆ.ಪರಮೇಶ್ ಉತ್ತನಹಳ್ಳಿ, ಎಂ.ಬಿ.ಸಂತೋಷ್, ಸಿ.ಎಸ್.ಭೈರಪ್ಪ, ಜ್ಯೋತಿ ಸೋಮರಾಜು, ಎಚ್.ಪಿ.ತೇಜಸ್, ಮುತ್ತೇಶ್ ಮೆಣಸಿನಕಾಯಿ, ಎಸ್. ಕೃಷ್ಣೇಗೌಡ, ಎಂ. ಪುರುಷೋತ್ತಮ, ರವಿ ಸೌತನಹಳ್ಳಿ, ಶ್ರುತಿ ಇತರರು ಕಾವ್ಯ ವಾಚನ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.