ಏ.29ರಿಂದ ಕನ್ನಡ ಕಾವ್ಯ ರಸಗ್ರಹಣ ತರಗತಿ ಆರಂಭ

Vijayavani-logo
Published on

ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನದ ಎಂ.ವಿ.ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರದಿಂದ ಏ.29ರಿಂದ ಹಳಗನ್ನಡ ಹಾಗೂ ಮಧ್ಯಕಾಲೀನ ಕಾವ್ಯ ರಸಗ್ರಹಣ ತರಗತಿಗಳನ್ನು ಆರಂಭಿಸಲಿದೆ. ಪ್ರತಿ ಸೋಮವಾರ ಹಾಗೂ ಗುರುವಾರ ಸಂಜೆ 5.30ರಿಂದ 7ರ ವರೆಗೆ ಅನ್‌ಲೈನ್ ಮತ್ತು ಆ್ಲೈನ್‌ನಲ್ಲಿ ತರಗತಿಗಳು ನಡೆಯುತ್ತವೆ. ಆಸಕ್ತರು ಏ.25ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ತರಗತಿಗಳು 8 ತಿಂಗಳ ಕಾಲ ನಡೆಯಲಿದ್ದು, ವಿದ್ವಾಂಸರಾದ ಡಾ. ಪಿ.ವಿ.ನಾರಾಯಣ, ಡಾ. ಆರ್.ಲಕ್ಷ್ಮೀನಾರಾಯಣ, ಡಾ. ಕೆ.ಆರ್.ಗಣೇಶ, ಡಾ. ರಾಜಪ್ಪ ದಳವಾಯಿ, ಡಾ. ಸಿ.ಕೆ.ಜಗದೀಶ್, ಡಾ. ಎನ್.ಆರ್.ಲಲಿತಾಂಬ, ಪ್ರೊ. ಚಂದ್ರಶೇಖರ ನಾದೂರು, ಡಾ. ಬೈರಮಂಗಲ ರಾಮೇಗೌಡ ಅವರು ಬೋಧನೆ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9972812127 ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾಂತರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net