ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ

Ksd_Kannada
Published on

ಕಾಸರಗೋಡು: ಬಹುಭಾಷಾ ಸಾಹಿತಿ, ದ್ರಾವಿಡ ಭಾಷಾ ಸಂಘಟನೆಯ ಅಧ್ಯಕ್ಷೆ ಡಾ.ಸುಷ್ಮಾ ಶಂಕರ್ ಅವರಿಗೆ ಕಾಸರಗೋಡು ಕನ್ನಡ ಭವನದ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಭವನದ ಸ್ಥಾಪಕ ಹಾಗೂ ನಿರ್ದೇಶಕ ಡಾ.ಕೆ. ವಾಮನ ರಾವ್ ಬೇಕಲ್, ಸಂಚಾಲಕಿ ಸಂಧ್ಯಾರಾಣಿ ಪ್ರಶಸ್ತಿ ಪ್ರದಾನ ಮಾಡಿದರು.

ಕ.ಸಾ.ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರೊ. ಪಿ.ಎನ್.ಮೂಡಿತ್ತಾಯ, ಡಾ.ಕೆ.ಕಮಲಾಕ್ಷ, ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದರು.

ಇಡಕ್ಕೇರಿ ಗೋವಿಂದನ್ ನಾಯರ್ ಅವರ ಕಥನ ಖಂಡಕಾವ್ಯವನ್ನು ಡಾ.ಸುಷ್ಮಾ ಶಂಕರ್ ‘ಭೂತದ ಹಾಡು’ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿಯನ್ನು ಹಿರಿಯ ಅನುವಾದಕ ಕೆ.ವಿ.ಕುಮಾರನ್ ಬಿಡುಗಡೆಗೊಳಿಸಿದರು. ಕವಿ ರವೀಂದ್ರನ್ ಪಾಡಿ ಉಪಸ್ಥಿತರಿದ್ದರು. ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net