

ಕಲಘಟಗಿ ತಾಲೂಕಿನ ಪ್ರತಿ ಅಂಗಡಿಗಳಿಗೆ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವತಿಯಿಂದ ಮಂಗಳವಾರ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ಶಂಕರಗೌಡ ಭಾವಿಕಟ್ಟಿ ಮಾತನಾಡಿ, ನಮ್ಮ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆಯಾಗದಂತೆ ರಾಜ್ಯದಲ್ಲಿನ ಕನ್ನಡ ಪರ ಸಂಘಟನೆಗಳು ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿವೆ. ಅಂತಹ ಹೋರಾಟಗಾರರನ್ನು ಬಂಧಿಸಿದು, ಸಂಘಟನೆಗಳಿಗೆ ಮಾಡಿದ ಅವಮಾನ. ಆದ್ದರಿಂದ ಕನ್ನಡ ಪರ ಹೋರಾಟಗಾರರು ಹಾಗೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದರು.
ಪ್ರತಿದಿನ ಸಾವಿರಾರು ವಿದ್ಯಾರ್ಥಿನಿಯರು ಧಾರವಾಡ ಅಥವಾ ಹುಬ್ಬಳ್ಳಿಯತ್ತ ಶಾಲಾ ಕಾಲೇಜ್ಗೆ ಹೋಗುತ್ತಾರೆ. ಬೆಳಗಿನ 9 ರಿಂದ 11 ಗಂಟೆಯವರೆಗೂ ಕಿಡಿಗೇಡಿಗಳು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಾರೆ. ಹೀಗಾಗಿ ಇಬ್ಬರು ಪೊಲೀಸರನ್ನು ಬಸ್ ನಿಲ್ದಾಣದ ಬೀಟ್ಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಮಂಜುನಾಥ ಹೊಸಮನಿ, ಶಂಕರ ರೆಡ್ಡೇರ, ಸೋಮಯ್ಯಾ ನೀರಲಗಿ, ದ್ಯಾಮಣ್ಣ ಬ್ಯಾಹಟ್ಟಿ, ರಾಜು ಬಾಳಿಕಾಯಿ, ಮಲ್ಲಯ್ಯ ಕಂಟೆಪ್ಪಗೌಡ್ರ, ಶೇಖಯ್ಯ ಹಿರೇಮಠ, ಮಂಜುನಾಥ ಮಲಕನಕೊಪ್ಪ, ಕಾಡಯ್ಯ ಹಿರೇಮಠ ಇದ್ದರು.