

ಇಂಡಿ: ಪಟ್ಟಣದ ಅಂಗಡಿ-ಮುಂಗಟ್ಟುಗಳ ನಾಮಫಲಕದಲ್ಲಿ ಶೇ.60 ಕನ್ನಡ ಹಾಗೂ ಶೇ.40 ಬೇರೆ ಭಾಷೆ ಬಳಸುವ ಸರ್ಕಾರದ ಆದೇಶವನ್ನು ಅಂಗಡಿ ವ್ಯಾಪಾರಸ್ಥರು ಉಲ್ಲಂಘಿಸಿ ಮನಸ್ಸಿಗೆ ಬಂದಂತೆ ನಾಮಲಕ ಹಾಕಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಮಾತನಾಡಿ, 2023ರ ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇತಿಹಾಸವನ್ನೇ ಸೃಷ್ಟಿಸಿತ್ತು. ಅಂದು ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೇತರ ನಾಮಲಕಗಳು ಧೆರೆಗುರುಳಿದವು. ನಮ್ಮ ಚಳವಳಿಗೆ ರಾಜ್ಯದ ಜನತೆ ತುಂಬು ಮನಸಿನಿಂದ ಬೆಂಬಲಿಸಿತ್ತು. ಕನ್ನಡ ನಾಮಲಕ ಬೇಕು ಎಂದು ದಶಕಗಳಿಂದ ಹಂಬಲಿಸುತ್ತಿದ್ದ ಮನಸುಗಳಿಗೆ ಸಮಾಧಾನ ತಂದ ಬಹುದೊಡ್ಡ ಹೋರಾಟ ಅದಾಗಿತ್ತು. ಹೋರಾಟದ ಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದಿಕೊಂಡಿತು. ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿರುವುದರಿಂದ ಅದು ಕಾನೂನಾಗಿ ಜಾರಿಯಾಗಿದೆ. ಇಷ್ಟೆಲ್ಲ ಹೋರಾಟ ನಂತರ ಈ ಕಾನೂನು ಪರಿಪೂರ್ಣವಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ. ರಾಜ್ಯದಲ್ಲಿನ ಎಲ್ಲ ನಾಮಲಕಗಳು ಕನ್ನಡೀಕರಣಗೊಳ್ಳುವವರೆಗೆ ಕನ್ನಡದಲ್ಲಿ ನಾಮಲಕ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಭಾಷಾವಾರು ಪ್ರಾಂತ್ಯಗಳು ವಿಂಗಡಣೆ ಆಗಿದ್ದೇ ಆಯಾ ನುಡಿ ಪರಂಪರೆಯನ್ನು ರಕ್ಷಿಸಲು, ಗೌರವಿಸಲು ಆಗಿದೆ. ಪಟ್ಟಣದಲ್ಲ್ಲಿ ಅನ್ಯಭಾಷೆಯ ಬೋರ್ಡ್‌ಗಳು ರಾರಾಜಿಸುತ್ತಿರುವುದನ್ನು ಕೂಡಲೇ ಸಂಬಂಧಿತ ಅಧಿಕಾರಿಗಳು ತೆರವು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಇನ್ನು 15 ದಿನಗಳ ಒಳಗಾಗಿ ಅನ್ಯಭಾಷೆ ನಾಮಲಕ ತೆರವು ಮಾಡದಿದ್ದರೆ ನಗರದಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಹಿಬೂಬ ಬೇನೂರ, ರಾಜು ಕುಲಕರ್ಣಿ, ಪ್ರವೀಣ ಪೊದ್ದಾರ, ಪ್ರವೀಣ ಭಜಂತ್ರಿ, ಸಚಿನ ನಾವಿ, ಶ್ರೀಕಾಂತ ಬಡಿಗೇರ, ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ, ಸಂತೋಷ ಬಡಿಗೇರ, ರವಿ ಹೂಗಾರ, ಪ್ರಶಾಂತ ಸಿಂಗೆ, ಅಭಿಷೇಕ ವಾಲಿಕಾರ, ಅಶೋಕ ಛಲವಾದಿ, ರಾಜು ರಾಠೋಡ, ಶಿವಾನಂದ ಮಡಿವಾಳ, ಪ್ರಶಾಂತ ಲಾಳಸಂಗಿ ಇತರರಿದ್ದರು.