ಕನ್ನಡ ನಾಮಫಲಕ ಕಡ್ಡಾಯಗೊಳಿಸಿ

Kannada Name Plate, Nidagundi, Karave, Tehsildar, Taluk Administration,
ಅಂಗಡಿ, ಹೊಟೇಲ್ ಸೇರಿ ವಿವಿಧೆಡೆ ಕನ್ನಡ ನಾಮಲಕ ಕಡ್ಡಾಯಗೊಳಿಸಲು ಆಗ್ರಹಿಸಿ ಕರವೇ ಪದಾಧಿಕಾರಿಗಳು ನಿಡಗುಂದಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಅಶೋಕ ಹಾರಿವಾಳ, ನಬಿರಸೂಲ ಬಾಣಕಾರ, ಚಂದ್ರಕಲಾ ಗಾಯಕವಾಡ, ಶಾಂತಮ್ಮ ಕೋಲಾರ, ಲಾಲಬಿ ಅಡಣಿ ಇತರರಿದ್ದರು.
Published on

ನಿಡಗುಂದಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಕನ್ನಡ ಫಲಕ ಅಳವಡಿಕೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸೋಮವಾರ ಕರವೇ (ನಾರಾಯಣಗೌಡ ಬಣ) ಪದಾಧಿಕಾರಿಗಳು ತಹಸೀಲ್ದಾರ್ ಎ.ಡಿ. ಅಮರವಾದಗಿ, ತಾಪಂ ಇಒ ವೆಂಕಟೇಶ ವಂದಾಲ, ಪಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಅಂಗಡಿ, ಹೊಟೇಲ್, ವಸತಿಗೃಹ, ಮದ್ಯದಂಗಡಿ, ಚಿತ್ರಮಂದಿರ ಹಾಗೂ ವಾಣಿಜ್ಯ ಕೇಂದ್ರಗಳ ಜಾಹೀರಾತು ಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸಲು ಸೂಚಿಸಬೇಕು. ಶಿಕ್ಷಣ ಸಂಸ್ಥೆಗಳು ಹಾಗೂ ವಾಣಿಜ್ಯ ಕೇಂದ್ರಗಳು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಸರ್ಕಾರಿ ವಾಹನಗಳಲ್ಲಿ ಕನ್ನಡ ನೋಂದಣಿ ಫಲಕ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ನಾಮಲಕ ಅಳವಡಿಸಬೇಕು ಎಂದು ಕೋರಿದರು.

ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆದ ಅವಳಿ ಜಿಲ್ಲಾ ಉಸ್ತುವಾರಿ ಅಶೋಕ ಹಾರಿವಾಳ, ಕರವೇ ನಿಡಗುಂದಿ ತಾಲೂಕು ಅಧ್ಯಕ್ಷ ನಬಿರಸೂಲ ಬಾಣಕಾರ, ಆಲಮಟ್ಟಿ ಗ್ರಾಮ ಘಟಕದ ಅಧ್ಯಕ್ಷ ಪತ್ತೇಸಾಬ ಚಾಂದ, ಲಕ್ಷ್ಮಣ ವಿಭೂತಿ, ಮಹೇಶ ಬಿರಾದರ, ಮುತ್ತು ಪೂಜಾರಿ, ಗುರು ವಂದಾಲ, ರವಿ ಗೊಳಸಂಗಿ, ಮೌಲಾ ಬಾಣಕಾರ, ಹುಲಗಪ್ಪ ಕೋಲಾರ, ಶರಣಮ್ಮ ಭಾವಿಕಟ್ಟಿ, ಚಂದ್ರಕಲಾ ಗಾಯಕವಾಡ, ಶಾಂತಮ್ಮ ಕೋಲಾರ, ಲಾಲಬಿ ಅಡಣಿ, ಮೀನಾಕ್ಷಿ ವಾಲಿಕಾರ, ರೇಣುಕಾ ಕೋಲಾರ, ಚಂದ್ರವ್ವ ತೆಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net