ಕನ್ನಡ ನಾಡು, ನುಡಿ ರಕ್ಷಣೆಗೆ ಶ್ರಮಿಸೋಣ

02 Jaggu 5
ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಭೋಜರಾಜನ ಪುನರ್ಜನ್ಮ ಇನ್ನಿತರ ಸತ್ಯಕಥೆಗಳು ಅನುವಾದಿತ ಕೃತಿ ಹಾಗೂ ಈ ಸ್ನೇಹ ಬಂಧನ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಮಂಗಲಾ ಮೆಟಗುಡ್ಡ, ಡಾ.ಸುನೀಲ ಪರೀಟ, ಯ.ರು. ಪಾಟೀಲ ಇತರರಿದ್ದರು.
Published on

ಬೆಳಗಾವಿ: ಕನ್ನಡ ಪ್ರಾಚೀನ ಭಾಷೆಯಾಗಿದ್ದು, ನಮ್ಮ ನಾಡು, ನುಡಿ ಉಳಿಸಿ, ಬೆಳೆಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಪತ್ರಕರ್ತ ಸಿ.ವೈ.ಮೆಣಸಿನಕಾಯಿ ರಚಿಸಿರುವ ಭೋಜರಾಜನ ಪುನರ್ಜನ್ಮಇನ್ನಿತರ ಸತ್ಯಕಥೆಗಳು ಅನುವಾದಿತ ಕೃತಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಲಕ್ಷ್ಮಣ ಡೊಂಬರ ರಚಿಸಿರುವ ಈ ಸ್ನೇಹ ಬಂಧನ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಪುಸ್ತಕ ಲೋಕಕ್ಕೆ ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.

ಸಾಹಿತಿ ಯ.ರು. ಪಾಟೀಲ ಈ ಸ್ನೇಹ ಬಂಧನ ಕೃತಿ ಪರಿಚಯಿಸಿ ಮಾತನಾಡಿ, ಬೋಧಕೇತರ ಸಾಹಿತಿಗಳಾಗಿ ವೈದ್ಯರು, ಇಂಜಿನಿಯರ್, ಕಂದಾಯ ಇಲಾಖೆ ಅಕಾರಿಗಳು ಕೃತಿ ರಚಿಸುತ್ತಿದ್ದಾರೆ. ಅವರಿಗೆ ವಿವಿಧ ಕ್ಷೇತ್ರದ ಅನುಭವ ಜಾಸ್ತಿ ಇರುವುದರಿಂದ ಅನುಭವ ಮೇಲೆ ಕಥೆ, ಕಾದಂಬರಿ, ಕವನ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದರೂ ಸಾಹಿತ್ಯದಲ್ಲಿ ತೊಡಗಿಕೊಂಡಿರುವುದು ಸ್ತುತ್ಯಾರ್ಹ ಕಾರ್ಯ ಎಂದು ಶ್ಲಾಘಿಸಿದರು. ಭೋಜರಾಜನ ಪುನರ್ಜನ್ಮ ಇನ್ನಿತರ ಸತ್ಯ ಕಥೆಗಳು ಕೃತಿ ಪರಿಚಯಿಸಿದ ಸಾಹಿತಿ ಡಾ.ಸುನೀಲ ಪರೀಟ ಮಾತನಾಡಿ, ವಾಸ್ತವಿಕ ನೆಲೆಗಟ್ಟಿನ ಮೇಲೆ ಇಂದು ನಡೆಯುವ ಅಪರಾಧ ಕುರಿತಾದ ನೈಜ ಘಟನೆಗಳನ್ನಾಧರಿಸಿದ ಹಿಂದಿ ಸತ್ಯಕಥೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಸಿ.ವೈ.ಮೆಣಸಿನಕಾಯಿ ಅವರು ಅಪರಾಧ ಮಾಡುವುದರಿಂದ ಸಮಾಜದ ಮೇಲಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದ್ದಾರೆಂದರು.

ಹಿರಿಯ ಸಾಹಿತಿ ಎಂ.ಎಸ್. ಇಂಚಲ ಮಾತನಾಡಿದರು. ಗೌರವ ಉಪಸ್ಥಿತರಾಗಿ ನಿವೃತ್ತ ಶಿಕ್ಷಕ ಚನಮಲ್ಲಪ್ಪ ಪುಟ್ಟಿ, ನಿವೃತ್ತ ಶಿಕ್ಷಕಿ ಇಂದಿರಾ ಹವಾಲ್ದಾರ, ನಿವೃತ್ತ ಶಿಕ್ಷಕಿ ಸಲೋಮಿ ಉಪ್ಪಾರ, ನಿವೃತ್ತ ಶಿಕ್ಷಕಿ ರೂಪಾ ಶಿಗ್ಗಾಂವ, ಮರ್ಶಿ ಕಿಣೇಕರ, ಭಾಗೀರಥಿ ದೇವದಾನ, ನಿವೃತ್ತ ಶಿಕ್ಷಕಿ ಸುಶೀಲಾ ಹಂಚಿನಮನಿ ಪಾಲ್ಗೊಂಡಿದ್ದರು. ಬಿ.ಬಿ.ಹಿರೇಮಠ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ ನಿರೂಪಿಸಿದರು. ಶಿಕ್ಷಕಿ ಭಾರತಿ ಕೋರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net