

ಚಿಕ್ಕೋಡಿ: ಕನ್ನಡ ಭಾಷೆ ಪ್ರೀತಿಸುವ ಜತೆಗೆ ಅನ್ಯ ಭಾಷೆಗಳನ್ನು ಗೌರವಿಸಬೇಕು ಎಂದು ಹಾರೂಗೇರಿ ಎಸ್‌ವಿಇಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ವಿ.ಎಸ್.ಮಾಳಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಭಾಷೆ ಬೆಳೆಸಬೇಕು. ಕನ್ನಡದಲ್ಲಿ ನ್ಯಾಯಾಲಯದ ತೀರ್ಪುಗಳನ್ನು ನೀಡುವ ನ್ಯಾಯಾಧೀಶರು ಹೆಚ್ಚಾಗಬೇಕು. ಕೆಎಲ್‌ಇ ಸಂಸ್ಥೆಗೂ ಕನ್ನಡ ಭಾಷೆಗೂ ಅವಿನಾಭಾವ ಸಂಬಂಧವಿದೆ. ಕನ್ನಡ ನಾಡು ಸಂಸ್ಕೃತಿಯ ಬೀಡು. ಕನ್ನಡ ಭಾಷೆ ಈ ನೆಲದ ಸಂಸ್ಕೃತಿಯ ವಿಶ್ವಕೋಶ ಎಂದು ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಸಗರೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಡಿ.ಬಿ.ಸೊಲ್ಲಾಪುರೆ, ಗಂಗಾ ಗೋಲಶೆಟ್ಟಿ, ದೀಪಾಲಿ ಪಾಟೀಲ, ಪಿ.ಎಂ.ಕಮತೆ, ಎಸ್.ಡಿ.ಖಾಜಿ, ಪಿ.ಸಿ.ಚವ್ಹಾಣ ಇತರರಿದ್ದರು. ಮೇಘಾ ಶೆಟ್ಟಿ ಸ್ವಾಗತಿಸಿದರು. ಪಲ್ಲಿವಿ ನಾಯ್ಕ, ರಾಧಿಕಾ ಪತ್ತಾರ ನಿರೂಪಿಸಿದರು. ಸುನೀಲ ದೇಸಾಯಿ ವಂದಿಸಿದರು.