

ಚಿಕ್ಕೋಡಿ: ಪಟ್ಟಣಕ್ಕೆ ಶನಿವಾರ ಆಗಮಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ವೀರಜ್ಯೋತಿಯನ್ನು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಹಾಗೂ ತಹಸೀಲ್ದಾರ್ ಚಿದಂಬರ ಕುಲಕರ್ಣಿ ನೇತತ್ವದಲ್ಲಿ ತಾಲೂಕಾಡಳಿತ ಹಾಗೂ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಬಳಿಕ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಮಾತನಾಡಿ, ಬ್ರಿಟಿಷರ ನಿದ್ದೆಗೆಡಿಸಿದ್ದ ಸಂಗೊಳ್ಳಿ ರಾಯಣ್ಣ ಸ್ವಾತಂತ್ರೃದ ಕನಸು ಕಟ್ಟಿಕೊಂಡೇ ಹುತಾತ್ಮನಾದ ಶೂರ. ಜನತೆಯ ಕಣ್ಮಣಿಯಾಗಿದ್ದ ರಾಯಣ್ಣ ಬ್ರಿಟಿಷರ ವಿರುದ್ಧ ಸಾರಿದ ಸಮರ ಅವಿಸ್ಮರಣೀಯ ಎಂದರು.
ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ, ಸಿಪಿಐ ವಿಶ್ವನಾಥ ಚೌಗಲಾ, ಪಿಎಸ್‌ಐ ಬಸನಗೌಡ ನೇರಲಿ, ಬಿಇಒ ಬಿ.ಎ.ಮೇಕನಮರಡಿ, ಲಕ್ಷ್ಮಣರಾವ ಚಿಂಗಳೆ, ಸಂಜು ಬಡಿಗೇರ, ನಾಗೇಶ ಮಾಳಿ,ಸಿದ್ದಪ್ಪ ಡಂಗೇರ, ರಾಜು ದತ್ತವಾಡೆ ಇತರರು ಇದ್ದರು.