ಕನ್ನಡ ನಾಡಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ

15-DVD-3
ದೇವದುರ್ಗದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಪ್ರಮುಖರಾದ ನರಸಿಂಗರಾವ್ ಸಕೀಲ್, ಹನುಮಂತ ಮನ್ನಾಪುರ, ನಾಗರಾಜ್ ಮಸ್ಕಿ, ಶಿವರಾಜ್ ಪೂಜಾರಿ, ತಿರುಪತಿ ಹೇಮನೂರು, ಕಲೀಲ್ ಅಹ್ಮದ್ ಹೌದೊಡ್ಡಿ, ಸಂದೇಶ್, ವೀರಭದ್ರ ತಾತ ಬಿ.ಗಣೇಕಲ್ ಇತರರಿದ್ದರು.
Published on

ದೇವದುರ್ಗ: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಮೈಸೂರಿನ ದಿವಾನರಾಗಿ ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.

ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡಿಗರ ಅಸ್ಮಿತೆ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಏಳಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರು, ಸರ್.ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಶ್ರಮಿಸಿದ್ದಾರೆ. ಭಾರತದ ಪ್ರಖ್ಯಾತ ಸಿವಿಲ್ ಇಂಜಿನಿಯರ್ ಆಗಿ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣಾರ್ಥವಾಗಿ ಜನ್ಮದಿನದಂದು ಇಂಜಿನಿಯರ್ಸ್‌ ಡೇ ಎಂದು ಆಚರಿಸಲಾಗುತ್ತಿದೆ ಎಂದರು.

ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ವಿಶ್ವೇಶ್ವರಯ್ಯ ಪ್ರಖ್ಯಾತ ಸಿವಿಲ್ ಅಭಿಯಂತರಾಗಿ ಮೈಸೂರು ಸಂಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. ಕೃಷ್ಣರಾಜಸಾಗರ ಆಣೆಕಟ್ಟು, ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ಬ್ಯಾಂಕ್ ಸ್ಥಾಪನೆ, ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ಕೊಡುಗೆ ನೀಡಿದ್ದಾರೆ. ಆರ್ಥಿಕ ತಜ್ಞರಾಗಿ ಶಿಕ್ಷಣ, ಕೈಗಾರಿಕೆ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನರಸಿಂಗರಾವ್ ಸಕೀಲ್, ಪ್ರಮುಖರಾದ ಹನುಮಂತ ಮನ್ನಾಪುರ, ನಾಗರಾಜ್ ಮಸ್ಕಿ, ಶಿವರಾಜ್ ಪೂಜಾರಿ, ತಿರುಪತಿ ಹೇಮನೂರು, ಕಲೀಲ್ ಅಹ್ಮದ್ ಹೌದೊಡ್ಡಿ, ಸಂದೇಶ್, ವೀರಭದ್ರ ತಾತ ಬಿ.ಗಣೇಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net