

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮಂಗಳವಾರ ವೀರ ಕನ್ನಡಿಗ ಟಿಪ್ಪು ಸೇನೆಯಿಂದ ತಾಯಿ ಭುವನೇಶ್ವರಿ, ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಪಟ್ಟಣದ ದೂದಪೀರಾಂ ದರ್ಗಾದಿಂದ ಕಿತ್ತೂರರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಡಾ.ಪುನೀತ ರಾಜಕುಮಾರ ಹಾಗೂ ಅನೇಕರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಸಿಪಿಐ ಬಿ.ವಿ. ನ್ಯಾಮಗೌಡ್ರ ಮೆವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕನ್ನಡ ಭಾಷೆ- ಸಂಸ್ಕೃತಿ, ನೆಲ- ಜಲದ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿಗಳ ಆತ್ಮಾವಲೋಕನವಾಗಬೇಕಿದೆ. ಕನ್ನಡ ಬದುಕಿನ, ಅನ್ನದ ಭಾಷೆಯಾಗಿ ನಿತ್ಯ ಜೀವನದಲ್ಲಿ ಬಳಕೆಯಾಗಬೇಕು ಎಂದು ತಿಳಿಸಿದರು. ಸಂಘಟನೆಯ ಅಧ್ಯಕ್ಷ ಜಾಕೀರ ಹುಸೇನ ಹವಾಲ್ದಾರ ಮಾತನಾಡಿದರು. ಅಂಜುಮನ್ ಕಮೀಟಿ ಅಧ್ಯಕ್ಷ ಎನ್.ಎಂ ಗದಗ, ಮೊಹ್ಮದ್ ಕಾರಡಗಿ, ಹಜರತ್ ಪಟೇಲ, ಜಮಾಲ್ ನದಾಫ್, ಸಾಧಿಕ ಬಾಗಲಕೋಟ, ಟಿಪ್ಪು ಸುಲ್ತಾನ ಸೂರಣಗಿ, ರಿಯಾಜ್ ಮಕಂದಾರ, ಮುಸ್ತಾಕ್ ಗುತ್ತಲ, ಖಾಜಾ ನಧಾಫ್, ಮಲೀಕ ಗುಡ್ಡದ, ಸಾಹೀಲ್ ಸವಣೂರ, ಅಖ್ತರ ಕಿಲ್ಲೇದಾರ್, ಇಸ್ಮಾಯಿಲ್ ಆಡೂರ, ಗೌಸ ಜಮಖಂಡಿ, ಯುಸೂಪ್ ಚೌರಿ, ಇರ್ಫಾನ್ ಮಿರ್ಜಾ, ದಾದಾಪೀರ ಮುಚ್ಚಾಲೆ, ಖಳಂದರ ಸೂರಣಗಿ, ಬಾಬಾ ಕೊರಗಿ ಇತರರಿದ್ದರು.