ಗಡಿನಾಡಿನ ಮಕ್ಕಳು ಶೈಕ್ಷಣಿಕ ಮುಂಚೂಣಿ ಸಾಧಿಸಿ : ಜಿಲ್ಲಾ ಶಿಕ್ಷಣಾಧಿಕಾರಿ ಸವಿತಾ ಪಿ. ಕರೆ

New Project (12)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಿರುವ ಹಲವಾರು ಸವಲತ್ತು ಸದ್ಬಳಕೆ ಮಾಡಿಕೊಳ್ಳುವ ಮೂಲಕ, ಶೈಕ್ಷಣಿಕವಾಗಿ ಮುಂಚೂಣಿಗೆ ಬರಬೇಕು ಎಂದು ಕಾಸರಗೋಡು ಕಂದಾಯ ಜಿಲ್ಲಾ ಶಿಕ್ಷಣಾಧಿಕಾರಿ ಸವಿತಾ ಪಿ. ಹೇಳಿದರು.

ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಶಿಕ್ಷಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕಾಸರಗೋಡು ಉಪಜಿಲ್ಲಾ ಸಮಿತಿ ಅಧ್ಯಕ್ಷೆ ಯಶೋದಾ ಕೆ.ಎ. ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಕೆ.ಪುಂಡರೀಕಾಕ್ಷ ಆಚಾರ್ಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯಶಿಕ್ಷಕಿ ಶೋಭಾರಾಣಿ, ಕೇಂದ್ರ ಸಮಿತಿ ಅಧಿಕೃತ ವಕ್ತಾರ ಜಬ್ಬಾರ್ ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಮಿತಿ ಉಪಾಧ್ಯಕ್ಷೆ ಶ್ರೀಲತಾ ಕೆ., ಕೇಂದ್ರ ಸಮಿತಿ ಲೆಕ್ಕ ಪರಿಶೋಧಕ ವಿಠಲ ಅಡ್ವಳ, ಬೇಕಲ ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷೆ ರಜನಿ ಕುಮಾರಿ ಉಪಸ್ಥಿತರಿದ್ದರು.

ಜಿಲ್ಲಾ ಶಿಕ್ಷಣಾಧಿಕಾರಿ ಸವಿತಾ ಪಿ. ಅವರನ್ನು ಅಭಿನಂದಿಸಲಾಯಿತು. ಎಲ್ಲೆಸ್ಸೆಸ್ ಮತ್ತು ಯುಎಸ್ಸೆಸ್ ವಿಜೇತ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹಾಗೂ ನಾಡೋಜ ಕಯ್ಯರ ಕಿಞ್ಞಣ್ಣ ರೈ ಸ್ಮರಣಾರ್ಥ ಶಾಲಾಮಟ್ಟದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕೆಂದ್ರ ಸಮಿತಿ ಅಧಿಕೃತ ವಕ್ತಾರ ಬಾಬು ಕೆ. ಪ್ರಸ್ತಾವನೆಗೈದರು. ಕಾಸರಗೋಡು ಉಪಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸುರೇಖಾ ಕೆ. ಸ್ವಾಗತಿಸಿದರು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ಪ್ರದೀಪ್ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು. ಬೇಕಲ ಹೊಸದುರ್ಗ ಉಪಜಿಲ್ಲಾ ಕಾರ್ಯದರ್ಶಿ ಧನ್ಯಶ್ರೀ ವಂದಿಸಿದರು.

ಪ್ರತಿನಿಧಿ ಸಮ್ಮೇಳನದಲ್ಲಿ ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಮತ್ತು ಬೇಕಲ ಹೊಸದುರ್ಗ ಕಾರ್ಯದರ್ಶಿ ಧನ್ಯಶ್ರೀ ವರದಿ ಮಂಡಿಸಿದರು. ಕೋಶಾಧಿಕಾರಿಗಳಾದ ಕುಶ ಪಿ.ಎಲ್. ಮತ್ತು ಶ್ರೀವಿದ್ಯಾ ಲೆಕ್ಕಪತ್ರ ಮಂಡಿಸಿದರು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ವಿನೋದ್ ರಾಜ್, ಲೆಕ್ಕ ಪರಿಶೋಧಕ ವಿಠಲ ಅಡ್ವಳ, ಉಪಾಧ್ಯಕ್ಷೆ ಶ್ರೀಲತಾ ಕೆ., ಉಪಜಿಲ್ಲಾ ಸಮಿತಿ ಅಧ್ಯಕ್ಷೆ ಯಶೋದಾ ಕೆ.ಎ., ರಜನಿ ಕುಮಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net