

ಲಕ್ಷ್ಮೇಶ್ವರ: ಕನ್ನಡ ಮಾಧ್ಯಮವರೆಂದು ಕೀಳರಿಮೆ ಬೆಳೆಸಿಕೊಳ್ಳಬೇಡಿ. ಕನ್ನಡ ಮಾಧ್ಯಮದಲ್ಲಿಯೇ ಕಲಿತು ದೇಶದ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶ್ರೀ ಪಾರ್ವತಿಬಾಯಿ ಎಸ್. ಬಹದ್ದೂರ ದೇಸಾಯಿ ಬಾಲಕಿಯರ ಪ್ರೌಢಶಾಲೆಯ ಸಭಾಭವನದಲ್ಲಿ ಗಜಾನನೋತ್ಸವ ಅಂಗವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಯಲಕ್ಷ್ಮೀ ಗಡ್ಡದ್ದೇವರಮಠ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮೀ ಮಹಾಂತಶೆಟ್ಟರ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಶಾರಕ್ಕ ಮಹಾಂತಶೆಟ್ಟರ್, ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಬಳಗದ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರ ದೇಸಾಯಿ, ಸದಸ್ಯರಾದ ರೋಹಿಣಿಬಾಯಿ ಬಹದ್ದೂರ ದೇಸಾಯಿ, ಮಹೇಶ ಲಿಂಬಯ್ಯಸ್ವಾಮಿಮಠ, ಎನ್.ಡಿ. ಗೌರಿ, ಎಸ್. ಎಸ್. ಮಠದ, ಪಿ.ಎಲ್. ಪಾಟೀಲ, ಡಿ.ಜಿ. ವೈದ್ಯ, ಕಾವ್ಯಾ ದೇಸಾಯಿ, ಶ್ವೇತಾ ಅಂಬಲಿ ಇದ್ದರು. ಎ.ಸಿ. ಹಿರೇಮಠ, ಆರ್.ಸಿ. ಉಮಚಗಿ, ಎಸ್.ಎಂ. ಹಾದಿಮನಿ, ಶೀಲಾ ತಳವಾರ ನಿರೂಪಿಸಿದರು.