

ಮಡಿಕೇರಿ: ಕನ್ನಡ ಸಾಹಿತ್ಯ ಜನಪರವಾದುದು. ೧೨ನೆಯ ಶತಮಾನದ ವಚನ ಚಳವಳಿಯ ಮೂಲಕ ಸಾಹಿತ್ಯಕ್ಕೆ ಹೊಸ ತಿರುವು ಸಿಕ್ಕಿತು. ಅಲ್ಲಿಂದ ಪ್ರಾರಂಭವಾಗಿ ಇಲ್ಲಿಯವರೆಗೆ ಅನೇಕ ಚಳವಳಿಗಳು ಕನ್ನಡ ಸಾಹಿತ್ಯವನ್ನು ಜನರ ಹತ್ತಿರಕ್ಕೆ ಕೊಂಡೊಯ್ದವು. ನವೋದಯ, ಪ್ರಗತಿಶೀಲ, ದಲಿತ-ಬಂಡಾಯ ಚಳವಳಿಗಳು ಸಾಹಿತ್ಯಕ್ಕೆ ಹೊಸಚೈತನ್ಯವನ್ನು ನೀಡಿವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯPರಾದ ಎಲ್.ಎನ್.ಮುಕುಂದರಾಜ್ ಹೇಳಿದರು.
ಕೊಡಗು ಜಿಯ ಚಕೋರ ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಚಳವಳಿ ಮತ್ತು ಸಾಹಿತ್ಯ ಅಂತರ್ ಸಂಬಂಧ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಲದ ಚರ್ಚೆ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಜರುಗಿದೆ. ಪಂಪ ಮನುಷ್ಯಜಾತಿ ತಾನೊಂದೆ ವಲಂ ಎಂದರೆ, ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಬಲ್ಲಿರಾ ಎಂದು ಪ್ರಶ್ನಿಸಿzರೆ. ವಚನಕಾರರಂತೂ ನಾಮವ ಹೊತ್ತು ತಿರುಗುವ ಗಾವಿಲರ ಮುಖವ ನೋಡಲಾಗದು ಎಂದಿರುವ ಬಗ್ಗೆ ತಿಳಿಸಿದ ಅವರು, ಹಿಂದೆ ಕಾಯಕ ಜೀವಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ಇರಲಿಲ್ಲ. ಶ್ರಮವನ್ನು ಜೀತ ಎಂದು ಭಾವಿಸಲಾಗುತ್ತಿತ್ತು. ಅದಕ್ಕೆ ಜಾತಿಯನ್ನು ಲಗತ್ತಿಸಲಾಗಿತ್ತು. ಇದರ ಜೊತೆಗೆ ಧರ್ಮದ ಹೆಸರಿನಲ್ಲಿ ಬಲಿಗಳನ್ನು ಆಚರಿಸಲಾಗುತ್ತಿತ್ತು. ಆದ್ದರಿಂದ ಶರಣರು, ಜಾತಿ-ಧರ್ಮದ ಕಾರಣಕ್ಕಾಗಿ ಕೊಲ್ಲುವುದು ಮಹಾಪಾತಕ ಎಂದು ಬಹಳ ಹಿಂದೆಯೇ ಹೇಳಿ ಹೋಗಿzರೆ ಎಂದು ತಿಳಿಸಿದರು.
ಅಕಾಡೆಮಿ ಸದಸ್ಯ ಡಾ.ಚಿಕ್ಕಮಗಳೂರು ಗಣೇಶ ಮಾತನಾಡಿ, ಚಳವಳಿ ಎಂಬುದು ಸಾಮುದಾಯಿಕ ಮುಂಚಲನೆ. ಯಾವಾಗಲೂ ಅದು ಸಮೂಹದ ಒಡಲಿನಿಂದ ಉದ್ಭವಿಸುವಂಥzಗಿದೆ. ಎಲ್ಲಿಯವರೆಗೆ ಅನ್ಯಾಯ-ದಬ್ಬಾಳಿಕೆಗಳು ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಚಳವಳಿಗಳು ಅಸ್ತ್ರವಾಗಿ ಬಳಕೆಯಾಗುತ್ತವೆ ಎಂದು ಹೇಳಿದರು.
ಮತ್ತೊಬ್ಬರನ್ನು ಮುಟ್ಟವುದನ್ನೇ ನಿಷೇಧಿಸಿರುವ ನಮ್ಮಂತಹ ಸಮಾಜದಲ್ಲಿ ಚಳವಳಿಗಳೇ ಮನುಷ್ಯರನ್ನು ಪರಸ್ಪರ ಬೆಸೆಯುವ ವೇದಿಕೆಗಳಾಗಿವೆ. ಅಂಥಲ್ಲಿ ಬೀದಿಯೇ ಪ್ರಜ್ಞೆಯನ್ನು ತುಂಬುವ ಮುಕ್ತ ವಿಶ್ವವಿದ್ಯಾನಿಲಯವಾಗಿ, ಅಲ್ಲಿ ಬಿತ್ತುವ ಚಿಂತನೆಯೇ ಪ್ರಮಾಣ ಗ್ರಂಥಗಳಾಗಿ, ಹೆರಾಟಗಾರರೇ ಆಚಾರ್ಯರಾಗಿ, ಅಂಥವರು ಅನುಭವ ಮಂಟಪದ ಮೂಲಕ ಬಿತ್ತುವ ಕಾಳಜಿಗಳೇ ಬದುಕಿನ ಪಾಠಗಳಾಗಿ ಕಾಣುವುದು ವಿಶೇಷ ಎಂದ ಅವರು, ಹೆಸಜಾಗೃತಿಯನ್ನು ಕೊಡುವ, ಆತ್ಮವಿಶ್ವಾಸವನ್ನು ತುಂಬುವ, ಭರವಸೆಗಳನ್ನು ಮೂಡಿಸುವ ಚಳವಳಿಗಳನ್ನು ಸಮಾಜದಲ್ಲಿ ಜೀವಂತವಾಗಿರಿಸಬೇಕು ಎಂದು ವಿವರಿಸಿದರು.
ಪ್ರಾಂಶುಪಾಲ ಮೇಜರ್ ಡಾ.ರಾಘವ.ಬಿ ಅಧ್ಯPತೆ ವಹಿಸಿ ಮಾತನಾಡಿದರು. ಚಕೋರ ಜಿ ಸಂಚಾಲಕ ಡಾ.ಜೆ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಚಾಲಕಿ ರಮ್ಯಾ ಮೂರ್ನಾಡು, ಅರಂಡ ರಂಗಚಾವಡಿಯ ವಿಠಲ, ಅಧ್ಯಾಪಕರಾದ ಮುಖೇಶ್, ಟಿ.ಎಸ್.ಮಹಾಲಕ್ಷ್ಮಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭಾರತದ ಚರಿತ್ರೆ ಕಂಡತೆ, ಗಾಂಧೀಜಿ ಮುಂದಾಳತ್ವದಲ್ಲಿ ಬಹುಜನರು ಪಾಲ್ಗೊಂಡ ಸ್ವಾತಂತ್ರ್ಯ ಹೋರಾಟವು ನಿಜಾರ್ಥದಲ್ಲಿ ಕೂಡಿ ಬಾಳುವುದನ್ನು ತೋರಿಸಿದ ಮಹತ್ವದ ಚಳವಳಿಯಾಗಿದೆ. ಅಂತೆಯೆ, ಸಾಮಾಜಿಕ ಸ್ವಾತಂತ್ರ್ಯದ ದೃಷ್ಟಿಯಿಂದ ಡಾ.ಅಂಬೇಡ್ಕರ್ ಒಬ್ಬರೇ ಒಂದು ಚಳವಳಿಗೆ ಸಮ. ಅವರು ಸಾಮಾಜಿಕ ನ್ಯಾಯದ ತಾಯಿಯಾದರೆ, ಸರ್ವಜನಾಂಗದ ಹಿತರPಣೆಯ ಹೊಣೆಹೊತ್ತು ಈ ಹೊತ್ತಿನ ಧರ್ಮವೂ ಧರ್ಮಗ್ರಂಥವೂ ಆಗಿರುವ ಸಂವಿಧಾನವು ಚಳವಳಿಗಳ ಮಹಾತಾಯಿ ಆಗಿದೆ. ಹಾಗಾಗಿ ವಿದ್ಯಾರ್ಥಿಗಳು ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸಿ ಗೌರವಿಸಬೇಕಿದೆ.
-ಡಾ.ಚಿಕ್ಕಮಗಳೂರು ಗಣೇಶ