ಜೀವನ ಕಲಿಸುವ ಕನ್ನಡ ಭಾಷೆ,  ಉಪನಿರ್ದೇಶಕಿ ತೇಜಶ್ವಿನಿ ನಾರಾಯಣಕರ ಅಭಿಮತ

IMG-20250812-WA0028-2_1-2.jpg
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕನ್ನಡ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರವು ಇಲ್ಲಿಯ ನವನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಜರುಗಿತು.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕಿ ತೇಜಶ್ವಿನಿ ನಾರಾಯಣಕರ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕನ್ನಡ ಉಪನ್ಯಾಸಕರ ಜವಾಬ್ದಾರಿ ಇಂದು ಹೆಚ್ಚಾಗಿದೆ. ಕನ್ನಡ ಕಲಿಸುವುದೆಂದರೆ ಅದು ಜೀವನ ಕಲಿಸಿದಂತೆ. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದುವರೆಯುವ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ನಿವೃತ್ತ ಪ್ರಾಚಾರ್ಯ, ಸಾಹಿತಿ ಡಾ. ವೈ.ಎಂ. ಯಾಕೊಳ್ಳಿ, ಉಳಿದ ವಿಷಯಗಳು ಮನೆಯನ್ನು ಕಟ್ಟಿದರೆ, ಕನ್ನಡವು ಮನಸ್ಸನ್ನು ಕಟ್ಟುತ್ತದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಧಾರವಾಡ ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎಸ್.ಬಿ. ಹಿರೇಮಠ, ಕರ್ನಾಟಕದ ಮನೆ ಮನಗಳ ಭಾಷೆಯಾದ ಕನ್ನಡ ವಿಷಯದಲ್ಲಿ ಯಾವುದೇ ಮಕ್ಕಳು ಅನುತ್ತೀರ್ಣರಾಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ನವನಗರ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ವೈ.ಎಫ್. ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಶಶಿಧರ ತೋಡಕರ ಗೋಷ್ಠಿ ನಡೆಸಿದರು.
ಡಾ. ಶರಣಮ್ಮ ಗೊರೆಬಾಳ, ಶ್ರೀಧರ ಹೆಗಡೆ, ವೈ.ಎಂ. ಯಾವಗಲ್ಲ, ಎಸ್.ಎ. ಕುರಿ, ಡಾ. ಗೋವಿಂದರಾಜ ತಳಕೋಡ ಇತರರು ಇದ್ದರು.

ಡಾ. ಜೆ.ಡಿ. ಗುಂಡಪಲ್ಲಿ ಸ್ವಾಗತಿಸಿದರು. ಡಾ. ಬಿ.ಅರ್. ರಾಠೋಡ ವಂದಿಸಿದರು. ಡಾ. ಶೇಖರ ಸಜ್ಜನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net