ಕನ್ನಡ ಭಾಷೆ ನಿಂತ ನೀರಾಗಬಾರದು

Published on

ಕೊಳ್ಳೇಗಾಲ : ಪಟ್ಟಣದ ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಕೊಂಗಳಪ್ಪ ಮಾತನಾಡಿ, ಕನ್ನಡ ಭಾಷೆ ನಿಂತ ನೀರಾಗಬಾರದು ಹರಿಯುವ ನೀರಾಗಬೇಕು. ಕನ್ನಡಿಗರಾದ ನಾವು ಮೊದಲು ನಮ್ಮ ಭಾಷೆಯನ್ನು ಪ್ರೀತಿ ಮಾಡಬೇಕು. ಕನ್ನಡದಲ್ಲಿಯೆ ವ್ಯವಹರಿಸಬೇಕು. ಅನ್ಯ ಭಾಷಿಕರಿಗೂ ಕನ್ನಡ ಕಲಿಸಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಯ ಚಾಮರಾಜೇಂದ್ರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸ್ಥಾಪನೆಗೊಂಡಿದೆ. ರಾಜ್ಯದಲ್ಲಿ 25,000 ಶಾಸನಗಳಿವೆ ತಾಳಗುಂದ, ಬನವಾಸಿ, ಪಟ್ಟದಕಲ್ಲು ಶಾಸನವನ್ನು ಎಲ್ಲರೂ ತಿಳಿಯಬೇಕಿದೆ ಎಂದರು.

ಸಾಹಿತಿ ದೊಡ್ಡಲಿಂಗೇಗೌಡ, ಲಯನ್ ಸಂಸ್ಥೆಯ ಅಧ್ಯಕ್ಷ ಲಯನ್ ಬಿ.ಚಿಕ್ಕಬಸವಯ್ಯ, ಲಯನ್ಸ್ ಸಂಸ್ಥೆಯ ನಿರ್ದೇಶಕ ಸಿ.ಚೆನ್ನಮಾದೇಗೌಡ, ತಾಯಮ್ಮ ಮಣಿ, ಶೇಖರ್, ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net