

ವಿಜಯವಾಣಿ ಸುದ್ದಿಜಾಲ ಮಧುಗಿರಿ
ಕನ್ನಡ ನಮ್ಮ ತಾಯಿ ಭಾಷೆಯಾಗಿದ್ದು, ಇದಕ್ಕೆ ಆದ್ಯತೆ ನೀಡಬೇಕು. ಇತರ ಭಾಷೆಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡುವುದು ಸಮಂಜಸವಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಶನಿವಾರ ತಾಲೂಕು ಕಸಾಪ ಮತ್ತು ತಾಲೂಕು ಪದವೀಧರರ ವೇದಿಕೆಯಿಂದ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯು ಪರೀೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ.100 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅತೀ ಹೆಚ್ಚು ಾನಪೀಠ ಪ್ರಶಸ್ತಿ ಪಡೆದ ಕೀರ್ತಿ ಕನ್ನಡಕ್ಕೆ ಸಲ್ಲುತ್ತದೆ. ನಾವೆಲ್ಲರೂ ಕನ್ನಡಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಬೇಕಿದೆ ಎಂದರು.
ಇಂದು ಯುವಪೀಳಿಗೆ ಮಹಾತ್ಮ ಗಾಂಧಿ ಮರೆಯುತ್ತಿದ್ದಾರೆ. ದೇಶದ ಬಗ್ಗೆ ಅಭಿಮಾನ ಬರಬೇಕು. ದೇಶಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಬೇಕು. ಹಳ್ಳಿಗಾಡಿನ ಮಕ್ಕಳು ಪಟ್ಟಣದ ಮಕ್ಕಳಿಗಿಂತಲೂ ಹೆಚ್ಚು ಬುದ್ಧಿವಂತರಾಗಿದ್ದು, ಶ್ರಮ ಜೀವಿಗಳಾಗಿದ್ದಾರೆ. ಕಷ್ಟದಲ್ಲಿ ಬೆಳೆದವರಿಗೆ ಬುದ್ಧಿಶಕ್ತಿ ಹೆಚ್ಚು. ಸಾಧಿಸುವ ಛಲ ಹುಟ್ಟುತ್ತದೆ. ದೇವರು ಯಾರಿಗೂ ಕಡಿಮೆ ಬುದ್ಧಿಶಕ್ತಿ ನೀಡಿಲ್ಲ. ಎಲ್ಲರಿಗೂ ಸಮಾನ ಶಕ್ತಿ ನೀಡಿರುತ್ತಾನೆ ಎಂದರು.
ತಾಲೂಕಿನ ಯುವಕ ಶಶಿಕುಮಾರ್ ಐಎ್ಎಸ್ ಪರೀೆಯಲ್ಲಿ ತೇರ್ಗಡೆಯಾಗಿದ್ದು, ಅವರಿಗಿರುವ ಛಲ, ಹಠ ನಿಮ್ಮಲ್ಲೂ ಬರಬೇಕು. ವಿದ್ಯೆ ಸೋಮಾರಿಗಳ ಸ್ವತ್ತಲ್ಲ. ಸಾಧಕರ ಸ್ವತ್ತು. ಶ್ರದ್ಧೆಯಿಂದ ಅಭ್ಯಾಸ ನಡೆಸಿದಾಗ ಯಶಸ್ಸು ಸಿಗಲಿದೆ. ಶಿಣಕ್ಕಾಗಿ ಸರ್ಕಾರ ಇಂದು ಹಲವಾರು ಸೌಕರ್ಯಗಳನ್ನು ಒದಗಿಸಿದ್ದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ನಡೆಸಿ ಯಶಸ್ಸು ಗಳಿಸಿ ವ್ಯಾಸಂಗ ನಡೆಸಿದ ಶಾಲೆಗೆ, ಪಾಲಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಮುನೀಂದ್ರ ಕುಮಾರ್ ಮಾತನಾಡಿ, ಯಶಸ್ಸನ್ನು ಯಾರೂ ಸಹ ಬೊಗಸೆಯಲ್ಲಿ ತಂದು ಹಾಕುವುದಿಲ್ಲ. ಶ್ರಮ ವಹಿಸಿದಾಗ ಮಾತ್ರ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳು ಶ್ರಮ ವಹಿಸಿ ಉತ್ತಮ ಶಿಣ ಪಡೆಯಿರಿ ಎಂದರು.
ಐಎಎಸ್ ಅಧಿಕಾರಿ ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮುಖ್ಯ. ಸ್ಪರ್ಧಾತ್ಮಕ ಪರೀೆಗಳಲ್ಲಿ ನಿರಂತರ ಅಭ್ಯಾಸ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶದ ಬಗ್ಗೆ ಧೈರ್ಯ ಗೆಡಬಾರದು. ಸೋಲೆ ಗೆಲುವಿನ ಮೆಟ್ಟಿಲು ಎಂಬ ಮಾತಿನಂತೆ ನಿರಂತರ ಅಭ್ಯಾಸದಿಂದ ಯಶಸ್ಸು ಗಳಿಸಬಹುದು ಎಂದರು. ಪುರಸಭೆ ಮಾಜಿ ಅದ್ಯ ಶಂಕರನಾರಾಯಣಶೆಟ್ಟಿ, ಎಂ.ಕೆ.ನಂಜುಂಡಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂದ ಅಧ್ಯ ಕೆ.ಟಿ.ಸಿದ್ದೇಶ್ವರ, ತಾಲೂಕು ಕಸಾಪ ಅಧ್ಯೆ ಸಹನಾ ನಾಗೇಶ್, ಪದಾಧಿಕಾರಿಗಳಾದ ಎಂ.ಎಸ್.ಶಂಕರ್ ನಾರಾಯಣ, ರಂಗಧಾಮಯ್ಯ, ಜಗದೀಶ್ ಕುಮಾರ್, ರಾಮಚಂದ್ರಪ್ಪ, ಮುಡ್ಲಗಿರೀಶ್, ರುದ್ರಾರಾಧ್ಯ, ವೀಣಾ ಶ್ರೀನಿವಾಸ್, ಗಾಯತ್ರಿ ನಾರಾಯಣ್, ಪ್ರಸಾದ್, ಹಿರಿಯ ಸಾಹಿತಿ ಮಲನ ಮೂರ್ತಿ ಇದ್ದರು.