ಶಿವಶರಣರಿಂದ ಕನ್ನಡ ಭಾಷೆ, ಸಾಹಿತ್ಯ ಶ್ರೀಮಂತ

mysore
Published on

ಮೈಸೂರು: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಶಿವಶರಣರು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಏರ್ಪಡಿಸಿದ್ದ ವಚನ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ನುಡಿಗಳು ಸಮಾಜವನ್ನು ಎಚ್ಚರಿಸಿ ಮನುಷ್ಯರ ನಡವಳಿಕೆಯನ್ನು ತಿದ್ದುವ ಪ್ರಕ್ರಿಯೆ ಆಗಿದೆ.

ತಂದೆ ತಾಯಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಇದನ್ನು ಅರಿತು ನೀವು ಅವರ ಮನ ನೋಯಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದರು.


ಯುವ ಜನಾಂಗದಲ್ಲಿ ಶರಣರ ತತ್ವ ಬಿತ್ತಬೇಕಿದೆ. ಈ ಕೆಲಸವನ್ನು ಶರಣ ಸಾಹಿತ್ಯ ಪರಿಷತ್ ಮಾಡುತ್ತಿರುವುದು ಸಂತೋಷ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿ, ಪರಿಷತ್ತು ವತಿಯಿಂದ ಮೈಸೂರಿನಲ್ಲಿ 75 ದತ್ತಿಗಳನ್ನು ಹೊಂದಿದ್ದು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.


ಶೈಲಾ ಸಿದ್ದರಾಮಪ್ಪ, ಸುಗುಣಾ, ಬಿ.ಎಂ.ಸಿದ್ದಲಿಂಗಸ್ವಾಮಿ ವಚನಗಳನ್ನು ಹಾಡಿದರು. ವಚನಗಳ ಕುರಿತು ಸದಾಶಿವಮೂರ್ತಿ, ಡಿ.ಎಸ್.ಮಹೇಶ್ವರಿ. ಡಾ.ಕೆ.ಎಸ್.ಮಲ್ಲೇಶ್ ವ್ಯಾಖ್ಯಾನಿಸಿದರು. ದತ್ತಿ ದಾನಿಗಳಾದ ಮಲ್ಲಿಕಾರ್ಜುನಪ್ಪ, ಅಪರ್ಣ ಗೀತಾ, ಶಾಂತಕುಮಾರ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರ್, ಪ್ರಾಧ್ಯಾಪಕ ಡಾ.ಡಿ.ಎಸ್.ಗುರು, ಕುಮಾರಸ್ವಾಮಿ, ಶಾರದಾ, ಶಿವಲಿಂಗಸ್ವಾಮಿ, ನೀಲಾಂಬಿಕಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net