ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರ

8 KNK 04
ಕನಕಗಿರಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಮೆರವಣಿಗೆಯಲ್ಲಿ ಸಿದ್ದರಾಮಯ್ಯ ಗುರುವಿನ್, ಹಾಲುಮತ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಕನಕಪ್ಪ, ನಾಗಪ್ಪ ಹುಗ್ಗಿ, ನಿರುಪಾದಿ ಇತರರಿದ್ದರು.
Published on

ಕನಕಗಿರಿ: ಕನಕದಾಸರು ಬಾಲ್ಯದಲ್ಲಿಯೇ ತರ್ಕ, ಮೀಮಾಂಸೆ, ವ್ಯಾಕರಣದಲ್ಲಿ ಪರಿಣತಿಯನ್ನು ಹೊಂದಿದ್ದರಲ್ಲದೇ, ಹರಿದಾಸ ಪರಂಪರೆಯಲ್ಲಿ ಗುರುತಿಸಿಕೊಂಡಿದ್ದರು ಎಂದು ಹಾಲುಮತ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ ಹೇಳಿದರು. ತಾಲೂಕಿನ ಸಿರವಾರ ಗ್ರಾಮದಲ್ಲಿ ಹಾಲುಮತ ಸಮಾಜದಿಂದ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಮಾತನಾಡಿದರು. ದಂಡ ನಾಯಕರಾಗಿ ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡ ಕನಕದಾಸರು ನಂತರ ಹರಿದಾಸ ಪರಂಪರೆಯಲ್ಲಿ ಕಾಣಿಸಿಕೊಂಡರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾಗಿದ್ದಾರೆ. ಸಮಾಜದಲ್ಲಿದ್ದ ತಾರತಮ್ಯವನ್ನು ಖಂಡಿಸಿದ ಅವರು, ಉಡುಪಿಯ ಶ್ರೀಕೃಷ್ಣನನ್ನೇ ತನ್ನ ಭಕ್ತಿಯಿಂದ ಒಲಿಸಿಕೊಂಡಿದ್ದು, ಇಂದಿಗೂ ಉಡುಪಿಯಲ್ಲಿ ಕನಕನ ಕಿಂಡಿಯನ್ನು ಕಾಣಬಹುದು ಎಂದರು. ಇದಕ್ಕೂ ಮೊದಲು ಕಳಸ ಕುಂಭಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಪ್ರಮುಖರಾದ ಹನುಮೇಶ ನಾಯಕ, ಪಕೀರಪ್ಪ ಬಂಕಾಪುರ, ಕನಕಪ್ಪ ಗುರಿಕಾರ್, ಭಾಷಾಸಾಬ ಬಳಿಗೇರ, ರಾಯಪ್ಪ ತಾವರಗೇರಾ, ಬಾರಿಮರದಪ್ಪ ನಡುಲಮನಿ, ಹುಲಗಪ್ಪ ದೊಡ್ಡಮನಿ, ಸಾಲಿಮ್ ಸಾಬ್, ಶರಣಪ್ಪ, ಬಾರಿಮರದಪ್ಪ ಬಂಡ್ರಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net