ಕನ್ನಡ ಭಾಷೆ ಬೆಳೆಸುವುದು ಎಲ್ಲರ ಹೊಣೆ

Harapanahalli kannada Ratha
ಹರಪನಹಳ್ಳಿಯ ಐಬಿ ವೃತ್ತದಲ್ಲಿ ಕನ್ನಡ ಜ್ಯೋತಿ ರಥವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸ್ವಾಗತಿಸಿದರು. ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು, ಕಸಾಪ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಎಚ್.ಮಲ್ಲಿಕಾರ್ಜುನ್, ಕರವೇ ತಾಲೂಕು ಅದ್ಯಕ್ಷ ಗಿರಜ್ಜಿ ನಾಗರಾಜ ಇತರರಿದ್ದರು.
Published on

ಹರಪನಹಳ್ಳಿ: ಕನ್ನಡ ನಾಡು ನುಡಿ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಿರಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆ ಬುಧವಾರ ಪಟ್ಟಣಕ್ಕೆ ಆಗಮಿಸಿದ ವೇಳೆ ಸ್ವಾಗತಿಸಿ ಮಾತನಾಡಿದರು.

ಆಂಗ್ಲ, ಇತರ ಭಾಷೆಗಳನ್ನು ಅಗತ್ಯಕ್ಕಷ್ಟೇ ಬಳಸಬೇಕು. ಆದರೆ ಕನ್ನಡ ಭಾಷೆ ತಾಯಿ ಇದ್ದಂತೆ. ಅದನ್ನು ಗೌರವಿಸಿ ಬೆಳೆಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದರು. ಕನ್ನಡ ರಥದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷಾರಾಂಡೋಲ್ ಕಲಾವಿದರು, ಶಾಲಾ ವಿದ್ಯಾರ್ಥಿಗಳ ನಡಿಗೆ ಗಮನ ಸೆಳೆಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ಮೆರವಣಿಗೆ ಹಳೇ ಬಸ್ ನಿಲ್ದಾಣ, ಪುರಸಭೆ ವೃತ್ತ, ಇಜಾರಿ ಶಿರಸಪ್ಪ ವೃತ್ತ ಹಾಗೂ ವಾಲ್ಮೀಕಿ ನಗರದ ಮೂಲಕ ಅರಸೀಕೆರೆ ಮಾರ್ಗವಾಗಿ ಜಗಳೂರಿಗೆ ಹೊರಟಿತು. ಪ್ರಮುಖರಾದ ಇಸ್ಮಾಯಿಲ್ ಎಲಿಗಾರ್, ಪೂಜಾರ್ ಬಸವರಾಜ್, ಮಾಡಲಗೇರಿ ಸುಭದ್ರಮ್ಮ, ಮೋರಿಗೆರೆ ಹೇಮಣ್ಣ, ಬಣಕಾರ ರಾಜಶೇಖರ, ಅಂಜಿನಪ್ಪ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಬಿಇಒ ಎಚ್.ಲೇಪಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net