ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಗಟ್ಟಿಯಾದ ಇತಿಹಾಸವಿದೆ

Kannada language and literature have a strong history.
Published on

ವಿಜಯಪುರ: ಕನ್ನಡ ನಾಡು&ನುಡಿ, ನೆಲ&ಜಲ, ಭಾಷೆ& ಭಾವನೆಗಳೊಂದಿಗೆ ನಾವೆಲ್ಲ ಕನ್ನಡಾಂಬೆಯ ಹೆಮ್ಮೆಯ ಮಕ್ಕಳಾಗಿ ಕನ್ನಡ ಭಾಷೆಯನ್ನು ಅತ್ಯಂತ ಅಭಿಮಾನದಿಂದ ಪ್ರೀತಿಸೋಣ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೊದ್ದಾರ ಹೇಳಿದರು.ನಗರದ ಕಸಾಪ ಸಭಾಂಗಣದಲ್ಲಿ ವಿವಿಧ ಮಹನೀಯರ ಪುಣ್ಯಸ್ಮರಣೆಯ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ, ಶರಣ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯದ ಕುರಿತು ನಡೆದ ಚಿಂತನಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಚಡಚಣದ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್​. ಮಾಗಣಗೇರಿ ಮಾತನಾಡಿ, ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯ ನಮ್ಮ ಸನಾತನ ಸಂಸತಿಯ ಎರಡು ಹೆಮ್ಮೆಯ ಪ್ರತಿಕಗಳು. ಜಾನಪದ ಸಾಹಿತ್ಯ ನಮ್ಮ ಉಸಿರಿನಲ್ಲಿ ಉಸಿರಾಗಿ ಸೇರಿಕೊಂಡಿದೆ. ಇಂತಹ ಹತ್ತು ಹಲವು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲಾ ಕಸಾಪ ಟಕವು ನಾಡು ನುಡಿಯ ಕುರಿತು ಅಭಿಮಾನ ಮೆರೆದು ಜಿಲ್ಲೆಯ ಗೌರವ ಹೆಚ್ಚಿಸಿದೆ ಎಂದರು.

ಶರಣ ಚಿಂತಕ ಮಹಮ್ಮದಗೌಸ ಹವಾಲ್ದಾರ ಶರಣ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಕುರಿತು ಹಾಗೂ ಅರ್ಜುಣಗಿ ಸರಕಾರಿ ಪ.ಪೂ ಕಾಲೇಜು ಉಪನ್ಯಾಸಕಿ ಡಾ. ಸವಿತಾ ಝಳಕಿ ಜಾನಪದ ನಡೆದು ಬಂದ ದಾರಿ ಹಾಗೂ ಜಾನಪದ ಸಾಹಿತ್ಯದಲ್ಲಿ ಗರತಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉಪಸ್ಥಿತಿ ವಹಿಸಿದ್ದ ಡಾ. ದಿಲೀಪರಾಜ ಪಾಟೀಲ, ಶಿವಕುಮಾರ ಬಾಗಿ, ರಂಗನಾಥ ಅಕ್ಕಲಕೋಟ, ಜಯಶ್ರೀ ಹಿರೇಮಠ ಹಾಗೂ ಸುಭಾಸ ಬೆಟಗೇರಿ ಮಾತನಾಡಿದರು.

ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಡಿವಾಳಮ್ಮ ನಾಡಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎ.ಎ. ಜಮಾದಾರ, ಗುರಣ್ಣ ಬಿರಾದಾರ, ಡಿ.ಎನ್​. ಕುರೇಶಿ, ತಬ್ಬಸ್ಸುಂಬೇಗಂ ಸೌದಿ, ರಾಚಪ್ಪ ವಪ್ಪಾರಿ, ಶಶಿಕಲಾ ಗೊಂಗಡಿ, ರಾಜೇಶ ಪಾಟೀಲ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ಸಿದ್ದರಾಯ ಆಕಳವಾಡಿ, ಚಂದ್ರಕಾಂತ ಕನಸೆ, ಫರೀದಾ ಬಾಗವಾನ, ಅಕ್ಬರ ಬಡಿಗೇರ, ಪರಶುರಾಮ ಬೆನಕನಹಳ್ಳಿ, ರಾಜಕುಮಾರ ಮಾಳಿ ಅವರನ್ನು ಮತ್ತು ಪ್ರೌಢಶಾಲೆಯ ಶಿಕ್ಷಕರಾದ ಸಂಗಮೇಶ ಬಂಡೆ, ಸಂತೋಷ ಜೇವರಗಿ, ರಾಜೇಶ ಭಂಡಿ, ಕೃಷ್ಣಪ್ಪ ಗಾಡಿವಡ್ಡರ, ಎಸ್​.ಬಿ. ಅವಟಿ, ಭೀಮಗೊಂಡ ಕೋಟ್ಯಾಳ, ಪ್ರಭುಗೌಡ ರಾರಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಜಗದೀಶ ಬೋಳಸೂರ ಸ್ವಾಗತಿಸಿ ಗೌರವಿಸಿದರು. ಡಾ. ಮಾಧವ ಗುಡಿ ಪರಿಚಯಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಪರವೀನ ಶೇಖ ವಂದಿಸಿದರು.ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಅರ್ಜುನ ಶಿರೂರ, ಮಲ್ಲಿಕಾರ್ಜುನ ಕೆಳಗಡೆ, ಕಮಲಾ ಮುರಾಳ, ಲತಾ ಗುಂಡಿ, ಅಹಮ್ಮದ ತಾಂಬಾ, ಮಹಾಂತೇಶ ಜಿತ್ತಿ, ಎ.ಸಿ. ಯಳಮೇಲಿ, ಲತಾ ಗುಂಡಿ, ಮಂಜುಳಾ ಕಾಳಗಿ, ಸಿದ್ದಪ್ಪ ಅಡವಿ, ಬಸವಂತರಾಯ ಹೊಸಮನಿ ಮತ್ತಿತರರಿದ್ದರು.

ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಿಂತನಾಗೋಷ್ಠಿಯನ್ನು ಮಹೇಶ ಪೊದ್ದಾರ ಉದ್ಘಾಟಿಸಿದರು. ಡಾ. ಎಂ.ಎಸ್​. ಮಾಗಣಗೇರಿ, ಶಿಲ್ಪಾ ಭಸ್ಮೆ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net